New Delhi : Startup ಗಳಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಜನವರಿ 16 ಅನ್ನು ‘ರಾಷ್ಟ್ರೀಯ ನವೋದ್ಯಮ ದಿನ’ ವಾಗಿ ( National Start-Up Day ) ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು (Prime Minister Narendra Modi) ಘೋಷಿಸಿದ್ದಾರೆ.
ಇಂದು ನವೋದ್ಯಮಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, “ಸ್ಟಾರ್ಟ್‌ಅಪ್‌ಗಳು ನವ ಭಾರತದ ಬೆನ್ನೆಲುಬಾಗಲಿವೆ. ಭಾರತ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ ವೇಳೆಗೆ, ಸ್ಟಾರ್ಟ್‌ಅಪ್‌ಗಳು ದೇಶದಲ್ಲಿ ಮುಖ್ಯ ಪಾತ್ರವಹಿಸುತ್ತವೆ. ದೇಶದ ನವೋದ್ಯಮಿಗಳು ಜಾಗತಿಕವಾಗಿ ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ.
ಈ ದಶಕವನ್ನು (Decade) ಭಾರತದ ‘Techade’ ಎಂದು ಕರೆಯಲಾಗುತ್ತಿದೆ. ನಾವಿನ್ಯತೆ, ಉದ್ಯಮಶೀಲತೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಉದ್ಯಮಶೀಲತೆ, ಸರ್ಕಾರಿ ಪ್ರಕ್ರಿಯೆಗಳಿಂದ ನಾವಿನ್ಯತೆಗಳಂತಹ ಪ್ರಮುಖ ಅಂಶಗಳನ್ನು ಹೊಂದಿವೆ” ಎಂದು ತಿಳಿಸಿದರು.
ನವೋದ್ಯಮವನ್ನು ಪ್ರೋತ್ಸಾಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜನವರಿ 16 ಅನ್ನು ರಾಷ್ಟ್ರೀಯ ನವೋದ್ಯಮ ದಿನ (National Start-up Day) ವನ್ನಾಗಿ ಆಚರಿಸಲಾಗುತ್ತದೆ ಎಂದು ಘೋಷಿಸಿದರು.