Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬುಧವಾರ ಆರು ಮಂದಿ ಮೋಸ್ಟ್ ವಾಂಟೆಡ್ ನಕ್ಸಲರು (Naxals) ಶರಣಾಗಿದ್ದಾರೆ. ಈ ಕುರಿತು ತ್ವರಿತ ನ್ಯಾಯ ಒದಗಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಗಳ ಸ್ಥಾಪನೆ ಸರ್ಕಾರ ಯೋಚಿಸುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
ಶರಣಾಗಿದ್ದ ನಕ್ಸಲರು ಶಸ್ತ್ರಾಸ್ತ್ರಗಳನ್ನು ಸಮರ್ಪಿಸಿಲ್ಲ ಎಂಬ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ, ಶಸ್ತ್ರಾಸ್ತ್ರಗಳ ಸ್ಥಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಚಿಕ್ಕಮಗಳೂರು ಕಾಡಿನಲ್ಲಿ ನಕ್ಸಲರು ಶಸ್ತ್ರಾಸ್ತ್ರ ಸಮೇತ ಓಡಾಡುತ್ತಿದ್ದರು ಎಂಬ ಗುಪ್ತಚರ ಮಾಹಿತಿ 4 ತಿಂಗಳ ಹಿಂದೆಯೇ ಲಭಿಸಿತ್ತು.
ಶಸ್ತ್ರಾಸ್ತ್ರಗಳ ಪತ್ತೆಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ Dysp ಬಾಲಾಜಿ ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ನಕ್ಸಲರ ಜೊತೆಗೆ ಸಂಬಂಧಿಸಿದ ಮಾಹಿತಿ ಕಲೆಹಾಕಲು ಪ್ರಯತ್ನಿಸುತ್ತಿದೆ.
ಶರಣಾದ ನಕ್ಸಲರು
- ಶೃಂಗೇರಿ ಮೂಲದ ಲತಾ
- ಕಳಸ ಮೂಲದ ವನಜಾಕ್ಷಿ
- ದಕ್ಷಿಣ ಕನ್ನಡದ ಸುಂದರಿ
- ರಾಯಚೂರಿನ ಮಾರಪ್ಪ ಅರೋಳಿ, ವಸಂತ
- ಎನ್. ಜೀಶಾ
ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶಸ್ತ್ರ ಹೋರಾಟಕ್ಕೆ ವಿದಾಯ ಹೇಳಿದ ಇವರು ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬಿಜೆಪಿ ಯುವ ಮೋರ್ಚಾ, ಶರಣಾಗಿದ್ದ ನಕ್ಸಲರ ಮೇಲಿನ ಕೇಸ್ ಗಳ ಹಿಂಪಡೆಯುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡುವ ಜೊತೆಗೆ ಫೇಸ್ಬುಕ್ ಮೂಲಕ ಅಭಿಯಾನವನ್ನು ಪ್ರಾರಂಭಿಸಿದೆ.
ನಕ್ಸಲರ ಶರಣಾಗತಿಗೆ ಆದರ ಸಿಗುತ್ತಿದ್ದರೂ, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳು ಎಲ್ಲಿ ಹೋಯಿತು ಎಂಬುದು ಇನ್ನೂ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.