Bengaluru: ಭಾರತದ ಮತ್ತು ವಿಶ್ವದ ಪ್ರಸಿದ್ಧ ಜಾವೆಲಿನ್ ತಾರೆಯರನ್ನು (Javelin meet) ಒಟ್ಟಿಗೆ ತರುವ ‘ನೀರಜ್ ಚೋಪ್ರಾ ಕ್ಲಾಸಿಕ್ 2025’ (Neeraj Chopra Classic 2025) ಸ್ಪರ್ಧೆ ಜುಲೈ 5ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಸ್ಪರ್ಧೆಯನ್ನು ವಿಶ್ವ ಅಥ್ಲೆಟಿಕ್ಸ್ ಮತ್ತು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಅಂಗೀಕರಿಸಿವೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಮೊದಲ ಜಾವೆಲಿನ್ ಸ್ಪರ್ಧೆಯಾಗಿದ್ದು, ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಗುರುತಿಸಲಾಗುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ತಾರೆಯರು
- ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ
- ಭಾರತದ ಸಚಿನ್ ಯಾದವ್
- ಜರ್ಮನಿಯ ಥಾಮಸ್ ರೋಹ್ಲರ್
- ಕೀನ್ಯಾದ ಜೂಲಿಯಸ್ ಯೆಗೋ
“ಇಂತಹ ಸ್ಪರ್ಧೆ ಭಾರತದಲ್ಲಿ ನಡೆಯುತ್ತಿದೆ ಎಂಬುದು ಖುಷಿಯ ಸಂಗತಿ. “ಆಯೋಜಕ, ಆಟಗಾರನಾಗಿ ಇದು ಸುಲಭವಲ್ಲ. ಸಹಜವಾಗಿ ನಾನು ಯಾವಾಗಲೂ ಆಟಗಾರನಾಗಿರಲು ಕೇಂದ್ರೀಕರಿಸಿರುತ್ತೇನೆ. ಆದರೆ ಈಗ ನಾನು ಎಲ್ಲವನ್ನೂ ನೋಡಿಕೊಳ್ಳಬೇಕು. ಒಬ್ಬ ಸಂಘಟಕನಾಗಿ, ನಾನು ಎಲ್ಲಾ ಸಣ್ಣ ವಿಷಯಗಳ ಬಗ್ಗೆಯೂ ಯೋಚಿಸಬೇಕು. ಈ ಸಂದರ್ಭದಲ್ಲಿ ನಮಗೆ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರ ಮತ್ತು ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಹೇಳಿದರು.
ಥಾಮಸ್ ರೋಹ್ಲರ್ (ಜರ್ಮನಿ), “ಗಾಯದಿಂದ ಚೇತರಿಸಿಕೊಂಡ ನಂತರ, ಭಾರತದಲ್ಲಿ ದೊಡ್ಡ ಸ್ಪರ್ಧೆಯಲ್ಲಿ ಭಾಗವಹಿಸುವುದು ಸಂತೋಷದ ಸಂಗತಿ.”
ಸಚಿನ್ ಯಾದವ್ (ಭಾರತ), “ನನ್ನಿಗೆ ಈ ಸ್ಪರ್ಧೆಗೆ ಆಹ್ವಾನ ಬಂದಾಗ ನಂಬಲಾಗಲಿಲ್ಲ. ವಿಶ್ವದ ಶ್ರೇಷ್ಠರ ಜೊತೆ ಭಾರತದಲ್ಲಿ ಸ್ಪರ್ಧೆ ಅನೇಕ ಅರ್ಥಗಳನ್ನೂ ಹೊಂದಿದೆ.”
ಜೂಲಿಯಸ್ ಯೆಗೋ (ಕೀನ್ಯಾ), “ಜಾವೆಲಿನ್ ಈಗ ಯುರೋಪ್‍ಗೆ ಮಾತ್ರ ಸೀಮಿತವಿಲ್ಲ. ಭಾರತದಲ್ಲಿ ಇಂತಹ ಬೆಂಬಲದಿರುವುದು ಹರ್ಷದ ಸಂಗತಿ.”
ಪಂದ್ಯಾವಳಿಯ ಮಾಹಿತಿ
- ದಿನಾಂಕ: ಜುಲೈ 5, 2025
- ಸಮಯ: ಸಂಜೆ 7 ಗಂಟೆಗೆ
- ಸ್ಥಳ: ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು
- ಟಿಕೆಟ್ ಗಳು: District by Zomato App ಮೂಲಕ ಲಭ್ಯ
- ನೇರ ಪ್ರಸಾರ
- ಟಿವಿ: ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 2
- OTT: ಜಿಯೋ Jio Hotstar