ಹೀರೋ ಮೋಟೋಕಾರ್ಪ್ (Hero MotoCorp) ದೇಶಾದ್ಯಾಂತ ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಕಂಪನಿಯ ವಿಡಾ (Vida) ಸರಣಿಯ ಎಲೆಕ್ಟ್ರಿಕ್ ಸ್ಕೂಟರ್ ಗಳಾದ (Electric Scooter) ವಿ1 ಪ್ಲಸ್ ಮತ್ತು ವಿ1 ಪ್ರೊ ಖರೀದಿಸುವ ಗ್ರಾಹಕರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇ-ಸ್ಕೂಟರ್‌ಗಳಿಗೆ ಪ್ರಬಲ ಸ್ಪರ್ಧೆ ಉಂಟುಮಾಡಲು ಹೀರೋ ಮೋಟೋಕಾರ್ಪ್ ಹೊಸ ವಿ2 (Vida V2) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ.
ಹೀರೋ ವಿ2 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿ2 ಲೈಟ್ (V2 Lite), ವಿ2 ಪ್ಲಸ್ (V2 Plus), ಮತ್ತು ವಿ2 ಪ್ರೊ (V2 Pro) ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಸ್ಕೂಟರ್‌ಗಳು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿವೆ.
- ಹೀರೋ ವಿಡಾ ವಿ2 ಲೈಟ್: ₹96,000 ಎಕ್ಸ್ ಶೋರೂಮ್ ದರದಲ್ಲಿ ಲಭ್ಯವಿದ್ದು, 2.2 ಕಿಲೋ ವಾಟ್ ಬ್ಯಾಟರಿ ಪ್ಯಾಕ್ ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 94 ಕಿಲೋಮೀಟರ್ ದೂರವನ್ನು ಹಾರುತ್ತದೆ ಮತ್ತು 69 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ.
- ಹೀರೋ ವಿಡಾ ವಿ2 ಪ್ಲಸ್: ₹1.15 ಲಕ್ಷ ಎಕ್ಸ್ ಶೋರೂಮ್ ದರದಲ್ಲಿ, 3.44 ಕಿಲೋ ವಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು, 143 ಕಿಲೋಮೀಟರ್ ದೂರ ಹಾರುತ್ತದೆ ಮತ್ತು 85 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ.
- ಹೀರೋ ವಿಡಾ ವಿ2 ಪ್ರೊ: ₹1.35 ಲಕ್ಷ ಎಕ್ಸ್ ಶೋರೂಮ್ ದರದಲ್ಲಿ, 3.94 ಕಿಲೋ ವಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು, 165 ಕಿಲೋಮೀಟರ್ ದೂರ ಹಾರುತ್ತದೆ ಮತ್ತು 90 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ.
ಈ ಎಲ್ಲ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ 7 ಇಂಚು ಟಚ್ ಸ್ಕ್ರೀನ್, ನ್ಯಾವಿಗೇಷನ್, ರೀ-ಜೆನ್ ಬ್ರೇಕಿಂಗ್, ಕೀಲೆಸ್ ಎಂಟ್ರಿ ಮತ್ತು ಕ್ರೂಸ್ ಕಂಟ್ರೋಲ್ ಮೊದಲಾದ ವೈಶಿಷ್ಟ್ಯಗಳನ್ನು ಹೊಂದಿವೆ.
ಹೀರೋ ವಿಡಾ ವಿ2 ಸ್ಕೂಟರ್‌ಗಳಿಗೆ 5 ವರ್ಷ ಅಥವಾ 50,000 ಕಿಲೋಮೀಟರ್ ವಾರಂಟಿ, ಬ್ಯಾಟರಿ ಪ್ಯಾಕ್‌ಗಾಗಿ 3 ವರ್ಷ ಅಥವಾ 30,000 ಕಿಲೋಮೀಟರ್ ವಾರಂಟಿ ನೀಡಲಾಗುತ್ತದೆ. 250ಕ್ಕೂ ಹೆಚ್ಚು ನಗರಗಳಲ್ಲಿ 3,100 ಹೀರೋ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಈ ಸ್ಕೂಟರ್‌ಗಳನ್ನು ಸುಲಭವಾಗಿ ಚಾರ್ಜ್ ಮಾಡಬಹುದು.