ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ Bajaj, ಹೊಸ 2025 ಪಲ್ಸರ್ NS400Z ಮೋಟಾರ್ಸೈಕಲ್‌ನ್ನು ಬಿಡುಗಡೆ ಮಾಡಿದೆ. ಈ ಸ್ಟ್ರೀಟ್ಫೈಟರ್ ಶೈಲಿಯ ಬೈಕ್ ಯುವಕರನ್ನು ಮನಮೆಳೆದಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವೈಶಿಷ್ಟ್ಯಪೂರ್ಣ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಬೆಲೆ ಹಾಗೂ ಎಂಜಿನ್ ಶಕ್ತಿ: ಈ ಬೈಕ್ ಬೆಲೆ ₹1,92,328 (ಎಕ್ಸ್-ಶೋರೂಂ). 373cc ಎಂಜಿನ್‌ನಿಂದ 43PS ಪವರ್ ಉತ್ಪತ್ತಿಯಾಗುತ್ತದೆ, ಹಿಂದಿನ 40PS ಪವರ್‌ಗೆ ಹೋಲಿಸಿದರೆ ಇದು ಉತ್ತಮವಾಗಿದೆ. ಇಂತಹ ಶಕ್ತಿಗೆ ಸೂಕ್ತವಾಗಿರುವಂತೆ ಇಂಜಿನ್ ತಂತ್ರಜ್ಞಾನ upgrade ಮಾಡಲಾಗಿದೆ.
ವೇಗ ಹಾಗೂ ಪರ್ಫಾಮೆನ್ಸ್: 2.7 ಸೆಕೆಂಡುಗಳಲ್ಲಿ 60 ಕಿ.ಮೀ ಮತ್ತು 6.4 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವ ಸಾಮರ್ಥ್ಯ ಹೊಂದಿದೆ. ಗರಿಷ್ಟ ವೇಗ 157 ಕಿ.ಮೀ! ರೇಡಿಯೇಟರ್ ಕವರ್ ಸವಾರರ ಕಾಲುಗಳನ್ನು ಎಂಜಿನ್ ಉಷ್ಣದಿಂದ ರಕ್ಷಿಸಲು ಮರು ವಿನ್ಯಾಸಗೊಳಿಸಲಾಗಿದೆ.
ಟೈರ್, ಬ್ರೇಕಿಂಗ್ ಮತ್ತು ಶಿಫ್ಟಿಂಗ್ ವೈಶಿಷ್ಟ್ಯಗಳು: ಮುಂಭಾಗ ಹಾಗೂ ಹಿಂಭಾಗದ ರೇಡಿಯಲ್ ಟೈರ್‌ಗಳು ಉತ್ತಮ ಗ್ರಿಪ್ ನೀಡುತ್ತವೆ. ಮುಂಭಾಗದ ಸಿಂಟರ್ಡ್ ಬ್ರೇಕ್ ಪ್ಯಾಡ್ ಗಟ್ಟಿತನ ಹೆಚ್ಚಿಸಿದೆ. ಈ ಹೊಸ ಪಲ್ಸರ್‌ನಲ್ಲಿ ಕ್ಲಚ್ ಇಲ್ಲದ ಫುಲ್ ಥ್ರೊಟಲ್ ಗೇರ್ ಶಿಫ್ಟ್ ವ್ಯವಸ್ಥೆ ಇರುವದು ವಿಶಿಷ್ಟತೆ.
ಟೆಕ್ನಾಲಜಿಗೆ ಭರಪೂರ ಜಾಗ
- ಡಿಜಿಟಲ್ ಕಲರ್ ಎಲ್ಸಿಡಿ ಕನ್ಸೋಲ್
- ಬ್ಲೂಟೂತ್ ಸಂಪರ್ಕ
- ಟರ್ನ್-ಬೈ-ಟರ್ನ್ ನ್ಯಾವಿಗೇಶನ್
- ಮ್ಯೂಸಿಕ್ ಕಂಟ್ರೋಲ್
- ಲ್ಯಾಪ್ ಟೈಮರ್
- ಟ್ರಾಕ್ಷನ್ ಕಂಟ್ರೋಲ್
- ನಾಲ್ಕು ರೈಡ್ ಮೋಡ್‌ಗಳು: ರೈನ್, ರೋಡ್, ಆಫ್-ರೋಡ್, ಸ್ಪೋರ್ಟ್ಸ್
ಮಾರ್ಕೆಟಿಂಗ್ ಮುಖ್ಯಸ್ಥ ಸುಮೀತ್ ನಾರಂಗ್ ಅವರು, “ಪಲ್ಸರ್ NS400Z ಕೈಗೆಟುಕುವ ದರದಲ್ಲಿ ಪರ್ಫಾಮೆನ್ಸ್ ಬಯಸುವ ಯುವಕರಿಗಾಗಿ ತಯಾರಾಗಿದೆ. ನಾವು ಸವಾರರ ಅಭಿಪ್ರಾಯ ಆಲಿಸಿ, ಆಧುನಿಕ ತಂತ್ರಜ್ಞಾನ ಹಾಗೂ ಉತ್ತಮ ಪವರ್‌ಗಾಗಿ ಈ ನವೀಕರಿಸಿದ ಮಾದರಿಯನ್ನು ಬಿಡುಗಡೆ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಬೈಕ್ ಪಲ್ಸರ್ NS200 ಮತ್ತು NS160 ಸಿರೀಸ್‌ನ ಭಾಗವಾಗಿದ್ದು, ಮಸ್ಕುಲರ್ ವಿನ್ಯಾಸ ಹಾಗೂ ಆಧುನಿಕ ಎಂಜಿನಿಯರಿಂಗ್‌ನಿಂದ ತುಂಬಿದೆ.
ಪವರ್ಫುಲ್ ಎಂಜಿನ್, ಆಧುನಿಕ ತಂತ್ರಜ್ಞಾನ, ಮತ್ತು ಯುವಕರ ಮನಗೆಲ್ಲುವ ವಿನ್ಯಾಸದೊಂದಿಗೆ ಬಜಾಜ್ 2025 ಪಲ್ಸರ್ NS400Z ಮಾರುಕಟ್ಟೆಗೆ ಬಿರುಸಿನ ಎಂಟ್ರಿ ನೀಡಿದೆ.