ಟಿ20 ಕ್ರಿಕೆಟ್‌ನಲ್ಲಿ (T20 cricket) ಹೊಸ ದಾಖಲೆಗಳು ನಿರಂತರವಾಗಿ ನಿರ್ಮಾಣವಾಗುತ್ತವೆ. ಗುಜರಾತ್ ಟೈಟನ್ಸ್ ಪರ ಆಡುತ್ತಿರುವ ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ರಶೀದ್ ಖಾನ್ ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ರಶೀದ್ ಖಾನ್ ಅವರು ಎಸ್ಎ20 ಲೀಗ್‌ನಲ್ಲಿ ಎಂಐ ಕೇಪ್ ಟೌನ್ ಪರ ಆಡಿದ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ, ವೆಸ್ಟ್ ಇಂಡೀಸ್ ಆಟಗಾರ ಡ್ವೇನ್ ಬ್ರಾವೋ ಅವರ ದಾಖಲೆಯನ್ನು ಮೀರಿಸಿದರು. ಇದುವರೆಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ 631 ವಿಕೆಟ್ ಗಳೊಂದಿಗೆ ಬ್ರಾವೋ ಅವರ ಹೆಸರಿನಲ್ಲಿತ್ತು. ಆದರೆ, ಈಗ ರಶೀದ್ ಖಾನ್ 633 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆ ಸಾಧಿಸಲು ರಶೀದ್ ಖಾನ್ 461 ಪಂದ್ಯಗಳನ್ನು ಆಡಿದ್ದಾರೆ, ಆದರೆ ಬ್ರಾವೋ 582 ಪಂದ್ಯಗಳಲ್ಲಿ ಈ ದಾಖಲೆಯನ್ನು ನಿರ್ಮಿಸಿದ್ದರು.
2015ರಲ್ಲಿ ಟಿ20 ಕ್ರಿಕೆಟ್‌ಗೆ ಪ್ರವೇಶಿಸಿದ ರಶೀದ್, ತಮ್ಮ ಲೆಗ್ ಸ್ಪಿನ್ ಹಾಗೂ ಗೂಗ್ಲಿ ಬೌಲಿಂಗ್‌ನಿಂದ ವಿಶ್ವದ ವಿವಿಧ ಲೀಗ್‌ಗಳಲ್ಲಿ ಪ್ರಭಾವ ಬೀರಿದ್ದಾರೆ. ಐಪಿಎಲ್, ಬಿಗ್ ಬ್ಯಾಷ್, ಪಿಎಸ್ಎಲ್, ಸಿಪಿಎಲ್, ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್, ದಿ ಹಂಡ್ರೆಡ್ ಸೇರಿದಂತೆ ಅನೇಕ ಟೂರ್ನಿಗಳಲ್ಲಿ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಈ ಸಾಧನೆಯ ಕುರಿತು ಮಾತನಾಡಿದ ರಶೀದ್, “ಅಫ್ಘಾನಿಸ್ತಾನ ತಂಡವನ್ನು ಪ್ರತಿನಿಧಿಸಿ ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಡ್ವೇನ್ ಬ್ರಾವೋ ಟಿ20 ಕ್ರಿಕೆಟ್ ನಲ್ಲಿ ಒಬ್ಬ ಶ್ರೇಷ್ಠ ಬೌಲರ್” ಎಂದಿದ್ದಾರೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್ಸ್
- ರಶೀದ್ ಖಾನ್ (ಅಫ್ಘಾನಿಸ್ತಾನ) – 633 ವಿಕೆಟ್
- ಡ್ವೇನ್ ಬ್ರಾವೋ (ವೆಸ್ಟ್ ಇಂಡೀಸ್) – 631 ವಿಕೆಟ್
- ಸುನಿಲ್ ನರೈನ್ (ವೆಸ್ಟ್ ಇಂಡೀಸ್) – 573 ವಿಕೆಟ್
- ಇಮ್ರಾನ್ ತಾಹಿರ್ (ದಕ್ಷಿಣ ಆಫ್ರಿಕಾ) – 531 ವಿಕೆಟ್
- ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) – 492 ವಿಕೆಟ್
ಗುಜರಾತ್ ಟೈಟಾನ್ಸ್ ತಂಡ ರಶೀದ್ ಖಾನ್ ಅವರನ್ನು 15 ಕೋಟಿ ರೂಪಾಯಿಗೆ ಕೀಪ್ ಮಾಡಿಕೊಂಡಿದೆ. ಈ ಸಾಧನೆಯ ಮೂಲಕ ರಶೀದ್ ಖಾನ್, ಟಿ20 ಕ್ರಿಕೆಟ್‌ನಲ್ಲಿ ತನ್ನದೇ ಆದ ಮಿಂಚು ಮೂಡಿಸಿದ್ದಾರೆ.