Washington: ಬೈಡನ್ (Biden) ಆಡಳಿತವು ಹೊಸ ನಿಯಮಗಳನ್ನು ಪ್ರಕಟಿಸಿದ್ದು, ಈ ನಿಯಮವು ಅಮೆರಿಕನ್ ಕಂಪನಿಗಳಿಗೆ (American companies) ವಿಶಿಷ್ಟ ಕೌಶಲ್ಯ ಹೊಂದಿರುವ ವಿದೇಶಿ ಉದ್ಯೋಗಿಗಳನ್ನು ನೇಮಿಸಲು ಸುಲಭವಾಗಲಿದೆ. ಹೊಸ ನಿಯಮಗಳು F-1 ವಿದ್ಯಾರ್ಥಿ ವೀಸಾವನ್ನು H-1B ವೀಸಾಗಳಿಗೆ ಸರಳವಾಗಿ ಪರಿವರ್ತಿಸಲು ಅವಕಾಶ ನೀಡುತ್ತವೆ.
ಡಿಪಾರ್ಟ್ಮೆಂಟ್ ಆಫ್ ಹೋಮ್ ಲ್ಯಾನ್ಡ್ ಸೆಕ್ಯುರಿಟಿ (Department of Homeland Security-DHS) ಹೊಸ ನಿಯಮದ ಮೂಲಕ H-1B ವೀಸಾಗಳಿಗೆ ವಾರ್ಷಿಕ ಮಿತಿಯಿಂದ ವಿನಾಯಿತಿ ನೀಡುವ ಮೂಲಕ ಉದ್ಯೋಗದಾತರು ಮತ್ತು ಕಾರ್ಮಿಕರಿಗೆ ಹೆಚ್ಚಿನ ಅನುಕೂಲಗಳನ್ನು ಒದಗಿಸು ವಾಗಿದೆ.
ಅಮೆರಿಕಾದ ಉದ್ಯೋಗದಾತರು ತಮ್ಮ ವ್ಯಾಪಾರದ ಅಗತ್ಯಗಳಿಗೆ ಅನುಗುಣವಾಗಿ ವಿದೇಶಿ ಉದ್ಯೋಗಿಗಳನ್ನು ನೇಮಿಸಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಸಹಾಯ ಮಾಡುವುದಾಗಿ ಈ ಹೊಸ ನಿಯಮಗಳು ಸರಳೀಕರಣವನ್ನು ಒದಗಿಸುತ್ತವೆ.
F-1 ವೀಸಾ ಹೊಂದಿದ ವಿದ್ಯಾರ್ಥಿಗಳು H-1B ವೀಸಾಗಳಿಗೆ ಸರಳವಾಗಿ ಪರಿವರ್ತಿಸಲು ಅವಕಾಶ ಪಡೆದಿದ್ದಾರೆ. ಈ ನಿಯಮದಿಂದ ಪೌರತ್ವ ಮತ್ತು ವಲಸೆ ಸೇವೆಗಳ ಅರ್ಜಿಗಳನ್ನು ಹೆಚ್ಚು ವೇಗವಾಗಿ ಪ್ರಕ್ರಿಯೆಗೊಳಿಸಬಹುದು.
ಹೊಸ ನಿಯಮಗಳು H-1B ವೀಸಾ ಪಡೆಯಲು ಅರ್ಹತೆಯ ಕಠಿಣ ನಿಯಮಗಳನ್ನು ಸರಳಗೊಳಿಸುತ್ತವೆ. ಅಮೆರಿಕದ ಕಾರ್ಮಿಕರ ರಕ್ಷಣೆಯೊಂದಿಗೆ, ಉದ್ಯೋಗದಾತರ ಮೇಲಿನ ಅನಗತ್ಯ ಹೊರೆಯನ್ನು ಕಡಿಮೆ ಮಾಡಲೂ ಇದು ಸಹಾಯ ಮಾಡುತ್ತದೆ.
H-1B ವೀಸಾ 1990ರಲ್ಲಿ ಜಾರಿಗೆ ಬಂದ ನಿಯಮವನ್ನು ಆಧುನೀಕರಿಸುವ ಮೂಲಕ, ಹೊಸ ನಿಯಮಗಳು ಜಾಗತಿಕ ಮಟ್ಟದಲ್ಲಿ ಪ್ರತಿಭೆಗಳ ನೇಮಕಕ್ಕೆ ಸಹಾಯ ಮಾಡುತ್ತವೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ (Department of Homeland Security) ಕಾರ್ಯದರ್ಶಿ ಅಲೆಜಾಂಡ್ರೊ ಎನ್. ಮಯೋರ್ಕಾಸ್ ತಿಳಿಸಿದ್ದಾರೆ.