Home News ಭಾರತದಲ್ಲಿ ಹೊಸ Samsung Galaxy ಬಡ್ಸ್ ಕೋರ್ ಬಿಡುಗಡೆ

ಭಾರತದಲ್ಲಿ ಹೊಸ Samsung Galaxy ಬಡ್ಸ್ ಕೋರ್ ಬಿಡುಗಡೆ

194
Samsung Galaxy Buds Core

ಸ್ಯಾಮ್‌ಸಂಗ್ ಕಂಪನಿ ತನ್ನ ಹೊಸ ಗ್ಯಾಲಕ್ಸಿ ಬಡ್ಸ್ ಕೋರ್ ವೈರ್‌ಲೆಸ್ (Samsung Galaxy) earphones ಭಾರತದಲ್ಲಿ ಬಿಡುಗಡೆ ಮಾಡಿದೆ. ಉತ್ತಮ ಧ್ವನಿ ಗುಣಮಟ್ಟ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಅಗ್ಗದ ಬೆಲೆಗೆ ನೀಡುವುದೇ ಇದರ ಉದ್ದೇಶವಾಗಿದೆ.

ಈ ಇಯರ್‌ಫೋನ್‌ಗಳಲ್ಲಿ ಡೈನಾಮಿಕ್ ಡ್ರೈವರ್‌ಗಳು ಇದ್ದು, ಉತ್ತಮ ಬಾಸ್ ಹಾಗೂ ಸ್ಪಷ್ಟ ಧ್ವನಿ ಅನುಭವ ಕೊಡುತ್ತವೆ. ಇದರಲ್ಲಿನ ಆಕ್ಟಿವ್ ನೊಯ್ಸ್ ಕ್ಯಾನ್ಸಲೇಶನ್ (ANC) ವೈಶಿಷ್ಟ್ಯವು ಹೊರಗಿನ ಶಬ್ದವನ್ನು ಕಡಿಮೆ ಮಾಡುತ್ತದೆ, ಇದರಿಂದ ನೀವು ಸ್ಪಷ್ಟವಾಗಿ ಮಾತನಾಡಬಹುದು ಮತ್ತು ಕೇಳಬಹುದು.

ಪ್ರತಿ ಇಯರ್‌ಬಡ್ ನ ಲ್ಲಿಯೂ ಮೂರು ಮೈಕ್ರೋಫೋನ್‌ಗಳು ಇರುತ್ತದೆ. ಇದರ ವಿನ್ಯಾಸವು ಕಿವಿಗೆ ಸುಲಭವಾಗಿ ಸೇರಿ, ಚಲನೆಯಲ್ಲಿಯೂ ಕೆಳಕ್ಕೆ ಬೀಳದಂತೆ ಇರಿಸುತ್ತದೆ.

ಇದರಲ್ಲಿ ಗ್ಯಾಲಕ್ಸಿ AI ವೈಶಿಷ್ಟ್ಯವಿದೆ – ಇದರ ಮೂಲಕ ನೈಜ ಸಮಯದ ಭಾಷಾಂತರವನ್ನು ಕೇಳುವ ಮತ್ತು ಮಾತನಾಡುವ ಪ್ರಕ್ರಿಯೆಯಲ್ಲಿ ಬಳಸಬಹುದು. ಉದಾಹರಣೆಗೆ, ನೀವು ನಿಮ್ಮ ಭಾಷೆಯಲ್ಲಿ ಮಾತನಾಡಿದಾಗ, ಬೇರೊಬ್ಬರು ಅದನ್ನು ತಮ್ಮ ಭಾಷೆಯಲ್ಲಿ ತಕ್ಷಣ ಕೇಳಬಹುದು.

ಇದಲ್ಲದೆ, ಈ ಇಯರ್‌ಫೋನ್‌ಗಳು ಸ್ಪರ್ಶ ನಿಯಂತ್ರಣ, ಬಹು-ಸಾಧನ ಸಂಪರ್ಕ ಮತ್ತು ಆಟೋ ಸ್ವಿಚ್ ವೈಶಿಷ್ಟ್ಯ ಹೊಂದಿವೆ. ಇವು Samsung Find ಆಪ್‌ನ ಮೂಲಕ ಕಳೆದುಹೋದಾಗ ಪತ್ತೆ ಮಾಡಬಹುದೂ ಆಗಿದೆ.

ಇದರಲ್ಲಿದೆ ಬ್ಲೂಟೂತ್ 5.4 ಸಂಪರ್ಕ ಮತ್ತು ಧೂಳು-ನೀರು ರಕ್ಷಣೆಗಾಗಿ IP54 ಪ್ರಮಾಣಪತ್ರ. ಬ್ಯಾಟರಿ ಬಾಳಿಕೆ, 35 ಗಂಟೆಗಳವರೆಗೆ ಕೆಲಸ ಮಾಡಬಹುದು (ANC ಇಲ್ಲದೇ) ಮತ್ತು ANC ಆನ್ ಮಾಡಿದರೆ 20 ಗಂಟೆಗಳವರೆಗೆ ಕೇಳಬಹುದು.

ಬೆಲೆ ಮತ್ತು ಆಫರ್: ಸ್ಯಾಮ್ಸಂಗ್ ಗ್ಯಾಲಕ್ಸಿ ಬಡ್ಸ್ ಕೋರ್ earphone ಗಳ ಬೆಲೆ ₹4,999. EMI ಆಯ್ಕೆ ರೂಪದಲ್ಲಿ ತಿಂಗಳಿಗೆ ₹417ರಿಂದ ಆರಂಭವಾಗುವ ಯೋಜನೆ ಲಭ್ಯ. ಗ್ಯಾಲಕ್ಸಿ A26, A36 ಅಥವಾ A56 ಸ್ಮಾರ್ಟ್ಫೋನ್ ಖರೀದಿಸಿದರೆ ₹1,000 ರ ರಿಯಾಯಿತಿ ಕೂಡ ಇದೆ.

ಬಣ್ಣಗಳು ಮತ್ತು ಲಭ್ಯತೆ: earbuds ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ದೊರೆಯುತ್ತವೆ. ಜೂನ್ 27, 2025 ರಿಂದ ಸ್ಯಾಮ್ಸಂಗ್ ವೆಬ್‌ಸೈಟ್, ಅಮೆಜಾನ್ ಮತ್ತು ಆಯ್ದ ಅಂಗಡಿಗಳಲ್ಲಿ ಲಭ್ಯವಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page