Home Entertainment Bengaluru ನಲ್ಲಿ Niagara Falls ಪ್ರತಿಕೃತಿ: ಅಭೂತಪೂರ್ವ ಮನರಂಜನೆ

Bengaluru ನಲ್ಲಿ Niagara Falls ಪ್ರತಿಕೃತಿ: ಅಭೂತಪೂರ್ವ ಮನರಂಜನೆ

332
Niagara Falls replica in Bengaluru

ಬೆಂಗಗಳೂರು ನಗರದ ಚಾಮರಾಜಪೇಟೆಯ ಐತಿಹಾಸಿಕ ಬಿನ್ನಿ ಮಿಲ್ ಮೈದಾನದಲ್ಲಿ ವಿಶ್ವಪ್ರಸಿದ್ಧ ನಯಾಗಾರಾ ಜಲಪಾತದ (Niagara Falls) 200 ಅಡಿ ಉದ್ದ ಮತ್ತು 25 ಅಡಿ ಎತ್ತರದ ಪ್ರತಿಕೃತಿ ನಿರ್ಮಾಣಗೊಂಡಿದೆ. ನೈಸರ್ಗಿಕ ಆಕರ್ಷಣೆಯ ಸೌಂದರ್ಯವನ್ನು ಪುನರುತ್ಪಾದಿಸುವ ಈ ಶಿಲ್ಪಕೃತಿ ಜನಮನ ಸೂರೆಗೊಳ್ಳುತ್ತಿದೆ.

ಈ ಜಲಪಾತದ ವೈಶಿಷ್ಟ್ಯವೆಂದರೆ, ಪ್ರತಿ ಗಂಟೆಗೆ 1 ಲಕ್ಷ ಲೀಟರ್ ನೀರನ್ನು ಪಂಪ್ ಮಾಡಲಾಗುತ್ತಿದ್ದು, ಬೋರ್ಗರೆವ ನೀರಿನ ಧಾರೆಯೊಂದಿಗೆ ಬಹುಬಣ್ಣದ ಬೆಳಕುಗಳು ಅದನ್ನು ಮತ್ತಷ್ಟು ವೀಕ್ಷಣೀಯಗೊಳಿಸುತ್ತವೆ. ದೀಪಗಳ ತಳಹದಿಯಲ್ಲಿ ಮಂಜು ಮತ್ತು ನೀರಿನ ಧಾರೆಗಳ ಸಮಾನ್ವಯ, ನೋಡುಗರಿಗೆ ನೈಜ ನಯಾಗಾರಾದ ಅನುಭವವನ್ನು ನೀಡುತ್ತದೆ.

ಈ ಅದ್ಭುತ ಜಲಪಾತದ ಜೊತೆಗೆ ‘ಫ್ಯಾಮಿಲಿ ಫೇರ್’ ಕೂಡ ಪ್ರಾರಂಭಗೊಂಡಿದ್ದು, ಮಾರ್ಚ್ 28 ರಿಂದ ಜೂನ್ 1ರವರೆಗೆ ನಡೆಯಲಿದೆ. ಇದರಲ್ಲಿ ರೋಬೋಟಿಕ್ ಬಟರ್ಫ್ಲೈ ಪಾರ್ಕ್, ಲೈವ್ ಪ್ರದರ್ಶನಗಳು, ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಳವನ್ನು ಮನರಂಜನೆಯ ಭಾಗವಾಗಿ ಕಾಣಬಹುದು.

ಸಂಜೆ 4 ರಿಂದ ರಾತ್ರಿ 9 ರವರೆಗೆ ನಡೆಯುವ ಈ ಉತ್ಸವದಲ್ಲಿ ಇಡೀ ಕುಟುಂಬದವರು ಒಂದಾಗಿ ಮೋಜು ಮಾಡಬಹುದು. ವಿಶಿಷ್ಟ ಸೆಲ್ಫಿ ಸ್ಪಾಟ್ ಗಳು, ವೀಕ್ಷಣಾ ಡೆಕ್ಕುಗಳು ಮತ್ತು ವಿವಿಧ ಆಕರ್ಷಣೆಗಳೊಂದಿಗೆ, ಈ ಅನನ್ಯ ಅನುಭವ ನಿಮ್ಮ ನೆನಪುಗಳಲ್ಲಿ ಸದಾ ಉಳಿಯಲಿದೆ!

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page