ಐಸಿಸಿ ಅಂಡರ್-19 ಮಹಿಳಾ ಟಿ20 (ICC Under-19 Women’s T20) ವಿಶ್ವಕಪ್ ಟೂರ್ನಿಯಲ್ಲಿ ನೈಜೀರಿಯಾ (Nigeria) ತಂಡವು ಐತಿಹಾಸಿಕ ಜಯ ಸಾಧಿಸಿದೆ. ನ್ಯೂಝಿಲೆಂಡ್ (New Zealand) ತಂಡವನ್ನು ಮಣಿಸುವ ಮೂಲಕ ನೈಜೀರಿಯಾ ಕ್ರಿಕೆಟ್ ಅಂಗಳದಲ್ಲಿ ತನ್ನ ಛಾಪು ಮೂಡಿಸಿದೆ. ಮಲೇಷ್ಯಾದ ಸರವಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು.
ಮಳೆಯ ಕಾರಣದಿಂದ 13 ಓವರ್ ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ನೈಜೀರಿಯಾ ಮೊದಲು ಬ್ಯಾಟ್ ಮಾಡಿ 65 ರನ್ ಗಳಿಸಿತು. ನಾಯಕಿ ಲಕ್ಕಿ ಪೈಟಿ 18 ರನ್, ಲಿಲಿಯನ್ ಉದೆ 19 ರನ್ ಬಾರಿಸಿದರು.
ನ್ಯೂಝಿಲೆಂಡ್ ತಂಡ 66 ರನ್ ಗುರಿ ಪಡೆದರೂ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. 12 ಓವರ್ ಗಳ ಮುಕ್ತಾಯಕ್ಕೆ 57 ರನ್ ಕಲೆಹಾಕಿದ ನ್ಯೂಝಿಲೆಂಡ್, ಕೊನೆಯ ಓವರ್‌ನಲ್ಲಿ 9 ರನ್ ಗಳ ಅವಶ್ಯಕತೆ ಇತ್ತು, ಆದರೆ ಲಿಲಿಯನ್ ಉದೆ ಕೇವಲ 6 ರನ್ ನೀಡಿದ ಪರಿಣಾಮ ನೈಜೀರಿಯಾ 2 ರನ್ ಗಳ ರೋಚಕ ಜಯ ಸಾಧಿಸಿತು.
ನ್ಯೂಝಿಲೆಂಡ್ ಮಹಿಳಾ ಅಂಡರ್-19 ಪ್ಲೇಯಿಂಗ್ 11
ಎಮ್ಮಾ ಮೆಕ್ಲಿಯೋಡ್, ಕೇಟ್ ಇರ್ವಿನ್, ಈವ್ ವೊಲಂಡ್, ಅನಿಕಾ ಟಾಡ್, ತಾಶ್ ವಾಕೆಲಿನ್ (ನಾಯಕಿ), ಡಾರ್ಸಿ ರೋಸ್ ಪ್ರಸಾದ್, ಅಯಾನ್ ಲ್ಯಾಂಬಾಟ್, ಎಲಿಜಬೆತ್ ಬುಕಾನನ್ (ವಿಕೆಟ್ ಕೀಪರ್), ಹನ್ನಾ ಫ್ರಾನ್ಸಿಸ್, ಅನಿಕಾ ಟೌವಾರೆ, ಹನ್ನಾ ಒಕಾನ್ನರ್.
ನೈಜೀರಿಯಾ ಮಹಿಳಾ ಅಂಡರ್-19 ಪ್ಲೇಯಿಂಗ್ 11
ಪೆಕ್ಯುಲಿಯರ್ ಅಗ್ಬೋಯಾ, ಲಕ್ಕಿ ಪಿಯೆಟಿ (ನಾಯಕಿ), ಅಡೆಶೋಲಾ ಅಡೆಕುನ್ಲೆ, ಕ್ರಿಸ್ಟಾಬೆಲ್ ಚುಕ್ವುಯೋನಿ, ಯುಸೆನ್ ಪೀಸ್, ಲಿಲಿಯನ್ ಉದೆ, ವಿಕ್ಟರಿ ಇಗ್ಬಿನೆಡಿಯನ್, ಡೆಬೊರಾ ಬಸ್ಸಿ (ವಿಕೆಟ್ ಕೀಪರ್), ಅನೋಯಿಂಟೆಡ್ ಅಖಿಗ್ಬೆ, ಮುಹಿಬತ್ ಅಮುಸಾ, ಒಮೊಕುನ್ಸ್.