Melbourne, Australia : Tennis ತಾರೆ ನೊವಾಕ್ ಜೊಕೊವಿಕ್ (Novak Djokovic) ಅವರನ್ನು ಆಸ್ಟ್ರೇಲಿಯಾ ಗಡೀಪಾರು (Deportation) ಮಾಡಿರುವ ವಿರುದ್ಧ ನ್ಯಾಯಾಲಯದ (Court) ಮೊರೆ ಹೋಗುವುದಾಗಿ ಆಟಗಾರ ತಿಳಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್‌ಗೆ (Australian Open Tennis) ಮುಂಚಿತವಾಗಿ Covid-19 ಲಸಿಕೆ ಪಡೆಯದ ಸೆರ್ಬಿಯಾ (Serbia) ದೇಶದ ಜೊಕೊವಿಕ್ ಪಂದ್ಯಾವಳಿಯಲ್ಲಿ ಆಡಲು ವೈದ್ಯಕೀಯ ವಿನಾಯಿತಿಯನ್ನು ಪಡೆದಿದ್ದರು.
ಎರಡು ಡೋಸ್ ಲಸಿಕೆ ಪಡೆದಿರುವ ಪುರಾವೆ ಇಲ್ಲದ ಕಾರಣ ಕಟ್ಟುನಿಟ್ಟಾದ ಕೋವಿಡ್ ಶಿಷ್ಟಾಚಾರ ಅವಶ್ಯಕತೆಗಳನ್ನು ಪೂರೈಸಲು ವಿಫಲವಾಗಿದ್ದಾರೆ ಎಂದು ಮೆಲ್ಬೋರ್ನ್ ಗೆ ಬಂದಿಳಿದ ನಂತರ ಆಸ್ಟ್ರೇಲಿಯಾ ದೇಶಕ್ಕೆ ಜೊಕೊವಿಕ್ ಪ್ರವೇಶವನ್ನು ನಿರಾಕರಿಸಲಾಯಿತು. “ಅವರ ಪ್ರವೇಶ ವೀಸಾವನ್ನು ರದ್ದುಗೊಳಿಸಲಾಗಿದೆ” ಎಂದು ಆಸ್ಟ್ರೇಲಿಯಾ ಗುರುವಾರ ಹೇಳಿಕೆ ನೀಡಿತ್ತು. ಜೊಕೊವಿಕ್‌ನ ವೀಸಾ(Visa) ತಿರಸ್ಕಾರಗೊಂಡ ಕಾರಣ, ಮೆಲ್ಬೋರ್ನ್‌ನ ತುಲ್ಲಾಮರೀನ್ ವಿಮಾನ ನಿಲ್ದಾಣದಲ್ಲಿ (Tullamarine Airport, Melbourne) ಅವರನ್ನು ಬಂಧಿಸಿ ಗಡೀಪಾರು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು.
ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ (Scott Morrison – Prime Minister of Australia) “ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತವೆ ಮತ್ತು ಯಾರನ್ನೂ ವಿಶೇಷವಾಗಿ ಪರಿಗಣಿಸಲಾಗುವುದಿಲ್ಲ” ಎಂದು ತಿಳಿಸಿದ್ದಾರೆ.
Image: Novak Djokovic (Twitter)