ಬೆಂಗಳೂರು ಮೂಲದ ನ್ಯೂಮೆರೋಸ್ ಮೋಟಾರ್ಸ್ (Numeros Motors) ಎಂಬ ಕಂಪನಿಯು ನವದೆಹಲಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ ಹೊಸ ಡಿಪ್ಲೋಸ್ ಮ್ಯಾಕ್ಸ್ (Diplos Max) ಇ-ಸ್ಕೂಟರ್ (e-scooter) ಅನ್ನು ಬಿಡುಗಡೆ ಮಾಡಿದೆ. ಅತ್ಯುತ್ತಮ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಿದೆ.
ಇ-ಸ್ಕೂಟರ್‌ನ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ. ರೌಂಡ್-ಹೆಡ್ಲೈಟ್, ಎಲ್ಇಡಿ ಡಿಆರ್ಎಲ್, ಓವಲ್ ಎಲ್ಇಡಿ ಬ್ರೇಕ್ ಲೈಟಿಂಗ್, ಮತ್ತು ಟರ್ನ್ ಸಿಗ್ನಲ್ ಗಳನ್ನು ಹೊಂದಿದೆ. ಇದರ ಬಾಡಿ ಪ್ಯಾನೆಲ್ ಗಟ್ಟಿಯಾಗಿದ್ದು, ಸೀಟ್ ಗಳೂ ವಿಶಾಲವಾಗಿವೆ, ಹೀಗಾಗಿ ಸವಾರರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.
ಈ ಇ-ಸ್ಕೂಟರ್ 3.7 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಡುಯಲ್ ಬ್ಯಾಟರಿ ಪ್ಯಾಕ್ ಬಳಕೆ ಮಾಡುತ್ತದೆ ಮತ್ತು ಒಂದು ಚಾರ್ಜ್‌ನಲ್ಲಿ 140 ಕಿಲೋಮೀಟರ್ ಓಡುತ್ತದೆ. ಇದು 3.58 ಪಿಎಸ್ ಅಶ್ವ ಶಕ್ತಿ ಹಾಗೂ 138 ಎನ್ಎಂ ಪೀಕ್ ಟಾರ್ಕ್ ಉತ್ಪತ್ತಿ ಮಾಡುವ ಹಬ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ. ಇದರ ಟಾಪ್ ಸ್ಪೀಡ್ 63 ಕೆಎಂಪಿಹೆಚ್ ಆಗಿದೆ.
ಈ ಇ-ಸ್ಕೂಟರ್‌ನಲ್ಲಿ ಸಣ್ಣ ಇನ್ಸ್ಟ್ರುಮೆಂಟ್ ಸ್ಕ್ರೀನ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಸುಲಭವಾಗಿ 1.2 ಕೆಡಬ್ಲ್ಯೂ ಚಾರ್ಜರ್ಗೆ ಪ್ಲಗ್ ಮಾಡಬಹುದು ಮತ್ತು 3 ರಿಂದ 4 ಗಂಟೆಯಲ್ಲಿ ಭರ್ತಿಯಾಗುತ್ತದೆ.
ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಅಡ್ಜೆಸ್ಟೇಬಲ್ ಡುಯಲ್ ಶಾಕ್ ಸಸ್ಪೆನ್ಷನ್ ಸೆಟಪ್ ಇದೆ. ಸವಾರರ ಸುರಕ್ಷತೆಗೆ ಡಿಸ್ಕ್ ಬ್ರೇಕ್‌ಗಳು ಮತ್ತು 12-ಇಂಚಿನ ವೀಲ್ ಗಳು ಮತ್ತು ಟ್ಯೂಬ್ಲೆಸ್ ಟೈರ್ ಗಳು ಲಭ್ಯವಿವೆ.