back to top
25.7 C
Bengaluru
Sunday, December 14, 2025
HomeKarnatakaDakshina Kannadaಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಗೆ ಗುರುವಂದನೆ

ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಗೆ ಗುರುವಂದನೆ

- Advertisement -
- Advertisement -

Vitla, Bantwal taluk, Dakshina Kannada : ಒಡಿಯೂರು ಸಂಸ್ಥಾನದ (Odiyoor Shree Gurudevadatta Samsthanam) ಗುರುದೇವ ಜ್ಞಾನಮಂದಿರದಲ್ಲಿ (Gurudeva Ganana Mandira) ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿ ವತಿಯಿಂದ ಗುರುವಂದನೆ (Guru Vandana) ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ (Shree Gurudevananda Swamiji) “ಒಳ್ಳೆಯ ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು . ಆತ್ಮಸುಖ ಲೋಕ ಹಿತದಲ್ಲಿ ಅಡಗಿದ್ದು ಎಲ್ಲರನ್ನೂ ನಮ್ಮಂತೆ ಕಾಣುವ ಮನಸ್ಸು ನಮ್ಮದಾಗಬೇಕು. ಸಂಸ್ಕಾರ, ಸಹಕಾರ, ಸಂಘಟನೆ, ಸಮೃದ್ಧಿಯ ಹಾದಿಯಲ್ಲಿ ನಡೆದಾಗ ನಮ್ಮ ಬದುಕು ಸದೃಢವಾಗಲು ಸಾಧ್ಯ. ವ್ಯಕ್ತಿ ವಿಕಾಸವೇ ದೇಶ ವಿಕಾಸದ ಮಂತ್ರ.” ಎಂದು ಆಶೀರ್ವಚನ ನೀಡಿದರು.

ಸಾಧ್ವಿ ಮಾತಾನಂದಮಯಿ, ಇರಾ ಸಮಿತಿಯ ಅಧ್ಯಕ್ಷ ಮಂಜುನಾಥ ಡಿ.ಶೆಟ್ಟಿ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ, ಕಾರ್ಯದರ್ಶಿ ಯಶವಂತ ವಿಟ್ಲ, ಸಹಕಾರಿಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಯೋಜನೆಯ ವಿಸ್ತರಣಾಧಿಕಾರಿ ಯಶೋಧರ ಸಾಲ್ಯಾನ್, ಗ್ರಾಮವಿಕಾಸ ಯೋಜನೆಯ ಉಡುಪಿ ವಲಯದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಗ್ರಾಮವಿಕಾಸ ಯೋಜನೆಯ ಉಡುಪಿ ವಲಯದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸಂಯೋಜಕಿ ಲೀಲಾ ಕೆ. , ರೇಣುಕಾ ಕಣಿಯೂರು ಮತಿತ್ತರರು ಉಪಸ್ಥಿತರಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page