
ಓಲಾ ಎಲೆಕ್ಟ್ರಿಕ್ (Ola Electric Scooter) ತನ್ನ ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯ ನಡುವೆ, ಕಂಪನಿಯು ಹೊಸ ಶ್ರೇಣಿಯ ಶಕ್ತಿಶಾಲಿ ಸ್ಕೂಟರ್ ಮಾದರಿಗಳನ್ನು ಪರಿಚಯಿಸಿದೆ. ಈ ಪೋರ್ಟ್ಫೋಲಿಯೊದಲ್ಲಿ ಒಟ್ಟು ನಾಲ್ಕು ರೂಪಾಂತರಗಳನ್ನು ಹೊಂದಿದೆ, ಮತ್ತು ಬೆಲೆ ರೂ. 79,999 ರಿಂದ ಆರಂಭವಾಗುತ್ತದೆ. ಇದರಿಂದ ಜೊತೆಗೆ, ಕಂಪನಿ ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ S1 ಪ್ರೊ ಪ್ಲಸ್ ಅನ್ನು ಸಹ ಬಿಡುಗಡೆ ಮಾಡಿದ್ದು, ಇದು 320 ಕಿ.ಮೀ. ವರೆಗೆ ಪ್ರಯಾಣಿಸಬಹುದಾದ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.
ನೂತನ 3ನೇ ತಲೆಮಾರಿನ ಸ್ಕೂಟರ್‌ಗಳಲ್ಲಿ S1 X, S1 X+, S1 Pro, S1 Pro+ ಮಾದರಿಗಳು ಸೇರಿದ್ದು, ಈ ಸ್ಕೂಟರ್ ಗಳಲ್ಲಿ 2 kWh ಬ್ಯಾಟರಿ ಪ್ಯಾಕ್ ನಿಂದ 5.3 kWh ಬ್ಯಾಟರಿ ಪ್ಯಾಕ್ ಗಳು ವಿವಿಧ ಆಯ್ಕೆಗಳಾಗಿ ಲಭ್ಯವಿವೆ. ಜೆನ್ 3 ಮಾದರಿಯಲ್ಲಿ ಹೊಸ ‘ಬ್ರೇಕ್ ಬೈ ವೈರ್’ ತಂತ್ರಜ್ಞಾನದಿಂದ, ಸ್ಕೂಟರ್ ನಿಂದ ಬಹಳಷ್ಟು ವೈರಿಂಗ್ ತೆಗೆದುಹಾಕಲಾಗಿದೆ. ಇದರ ಫಲವಾಗಿ, 3ನೇ ತಲೆಮಾರಿನ ವ್ಯಾಪ್ತಿಯು ಅತ್ಯಧಿಕವಾಗಿದೆ.
S1 X (ಜನರೇಷನ್ 3)
- ಬ್ಯಾಟರಿ ಪ್ಯಾಕ್ ಆಯ್ಕೆ: 2 kWh, 3 kWh, 4 kWh
- ಗರಿಷ್ಠ ವೇಗ: 123 ಕಿ.ಮೀ./ಗಂಟೆ
- ವ್ಯಾಪ್ತಿ: 242 ಕಿ.ಮೀ.
- ಬೆಲೆ: 2 kWh – ₹79,999, 3 kWh – ₹89,999, 4 kWh – ₹99,999
S1 X+ (ಜನರೇಷನ್ 3)
- ಬ್ಯಾಟರಿ ಪ್ಯಾಕ್: 4 kWh
- ಗರಿಷ್ಠ ವೇಗ: 125 ಕಿ.ಮೀ./ಗಂಟೆ
- ವ್ಯಾಪ್ತಿ: 242 ಕಿ.ಮೀ.
- ಬೆಲೆ: ₹1,07,999
S1 Pro (ಜನರೇಷನ್ 3)
- ಬ್ಯಾಟರಿ ಪ್ಯಾಕ್ ಆಯ್ಕೆ: 3 kW, 4 kW
- ಗರಿಷ್ಠ ವೇಗ: 125 ಕಿ.ಮೀ./ಗಂಟೆ
- ವ್ಯಾಪ್ತಿ: 242 ಕಿ.ಮೀ.
- ಬೆಲೆ: 3 kW – ₹1,14,999, 4 kW – ₹1,34,999
S1 Pro+ (ಜನರೇಷನ್ 3)
- ಬ್ಯಾಟರಿ ಪ್ಯಾಕ್ ಆಯ್ಕೆ: 4 kW, 5.3 kW
- ಗರಿಷ್ಠ ವೇಗ: 141 ಕಿ.ಮೀ./ಗಂಟೆ
- ವ್ಯಾಪ್ತಿ: 320 ಕಿ.ಮೀ.
- ಬೆಲೆ: 4 kW – ₹1,54,999, 5.3 kW – ₹1,69,999