ಪುಣೆ ಮೂಲದ Gennova ಪ್ರಯೋಗಾಲಯದಲ್ಲಿ ವೇಗವಾಗಿ ಹರಡುವ Omicron ರೂಪಾಂತರಕ್ಕಾಗಿ mRNA ಲಸಿಕೆಯನ್ನು ಅಭಿವೃದ್ಧಿಪಡಿಸಿದೆ, ಇದರ ಪರಿಣಾಮಕಾರಿತ್ವ, ಇಮ್ಯುನೊಜೆನಿಸಿಟಿ ಮತ್ತು ಮಾನವ ಬಳಕೆಗಾಗಿ ಶೀಘ್ರದಲ್ಲೇ ಪರೀಕ್ಷಿಸಲ್ಪಡುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ (TOI) ವರದಿ ಮಾಡಿದೆ.
ವರದಿಯ ಪ್ರಕಾರ, ಭಾರತವು ಶೀಘ್ರದಲ್ಲೇ ತನ್ನ ಮೊದಲ ಮೆಸೆಂಜರ್ ಅಥವಾ mRNA ಲಸಿಕೆಯನ್ನು ಪರಿಚಯಿಸಲಿದೆ. ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್‌ನಿಂದ (Gennova Biopharmaceuticals Ltd) ಹಂತ 3 ಕ್ಲಿನಿಕಲ್ ಪ್ರಯೋಗಗಳು ಮುಕ್ತಾಯಗೊಳ್ಳಲಿವೆ. ಸಂಸ್ಥೆಯು ಇತ್ತೀಚೆಗೆ Delta ರೂಪಾಂತರದಲ್ಲಿ ಅಭಿವೃದ್ಧಿಪಡಿಸಿದ ಎರಡು-ಡೋಸ್ mRNA ಲಸಿಕೆಯ 3,000 ವ್ಯಕ್ತಿಗಳ ಮೇಲೆ ನಡೆಸಿದ 2 ನೇ ಹಂತದ ಪ್ರಯೋಗ ಡೇಟಾವನ್ನು ಸಲ್ಲಿಸಿದೆ ಮತ್ತು 3 ನೇ ಹಂತದ ಪ್ರಯೋಗಗಳನ್ನು ಶೀಘ್ರದಲ್ಲಿಯೇ ಪೂರೈಸಲಿದೆ ಎಂದು ತಿಳಿಸಿದೆ.
mRNA ಲಸಿಕೆ ತಂತ್ರಜ್ಞಾನ
ಮೆಸೆಂಜರ್ ಆರ್‌ಎನ್‌ಎ (Messenger RNA) ಅಥವಾ mRNA ತಂತ್ರಜ್ಞಾನವು ಲಸಿಕೆ ಸ್ವೀಕರಿಸುವವರ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಉತ್ತೇಜಿಸಲು ವೈರಸ್‌ನ ಜೆನೆಟಿಕ್ ಕೋಡ್‌ನಲ್ಲಿ (ಆರ್‌ಎನ್‌ಎ) ಸಣ್ಣ ಭಾಗವನ್ನು ಮಾರ್ಪಡಿಗೊಳಿಸಲಾಗುತ್ತದೆ. ಇದರಿಂದ ನಿಜವಾದ ಕರೋನವೈರಸ್ ಅಲ್ಲದ ಆದರೆ ವೈರಸ್ ಅನ್ನು ಅನುಕರಿಸುವ ಪ್ರೋಟೀನ್‌ಗಳನ್ನು ತಯಾರಿಸಲು ಮಾನವ ಜೀವಕೋಶಗಳಿಗೆ ಇದು ಸೂಚನೆಗಳನ್ನು ನೀಡುತ್ತದೆ, ಆದ್ದರಿಂದ ಮನುಷ್ಯನಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಈ ತಂತ್ರಜ್ಞಾನದಿಂದ ಯಶಸ್ವಿಯಾಗುತ್ತದೆ.