Geneva, Switzerland : ವಿಶ್ವದಾದ್ಯಂತ ಲಸಿಕೆ (Covid-19 Vaccine) ಪಡೆದ ಹಾಗೂ ಪಡೆಯದ ಇಬ್ಬರೂ Omicron ರೂಪಾಂತರಿ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು World Health Organization (WHO) ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ (Dr Soumya Swaminathan) ಸ್ಪಷ್ಟಪಡಿಸಿದ್ದಾರೆ. ಹಲವಾರು ದೇಶಗಳಲ್ಲಿ ಸಂಖ್ಯೆಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದರೂ ಸಹ ತೀವ್ರತೆಯ ಮಟ್ಟ ಕಡಿಮೆಯಾಗಿಯೇ ಇದೆ ಹಾಗಾಗಿ ಲಸಿಕೆಗಳು ಒಮಿಕ್ರೋನ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಸಾಬೀತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬುಧವಾರ WHO ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮಿನಾಥನ್, COVID-19 ವಿರುದ್ಧ ಲಸಿಕೆ ಮರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಕಾರಣವಾಗುವ ಅಂಶಗಳನ್ನು ವಿವರಿಸುತ್ತಾ, “ಲಸಿಕೆಯ ಪರಿಣಾಮಕತೆಯು ಜೈವಿಕ ಅಂಶಗಳಾದ ವಯಸ್ಸು, ವ್ಯಕ್ತಿಗೆ ಇರುವ ಕಾಯಿಲೆಗಳು ಮತ್ತು ಲಸಿಕೆ ಪಡೆದ ಕೆಲ ಸಮಯದ ನಂತರ ಕ್ಷೀಣಿಸುವ ರೋಗನಿರೋಧಕ ಶಕ್ತಿಯ ಮೇಲೂ ಅವಲಂಬಿತವಾಗಿದೆ, ನೀವು ಹಿರಿಯ ವಯಸ್ಸಿನವರಾಗಿದ್ದು, ಕಾಯಿಲೆಗಳಿಂದ ಬಳಲುತ್ತಿದ್ದರೆ ನಿಮಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ” ಎಂದು ಅವರು ಹೇಳಿದ್ದಾರೆ.