OnePlus ತನ್ನ ಎರಡು ಹೊಸ smartphonesಗಳಾದ OnePlus 13 ಮತ್ತು OnePlus 13R ಅನ್ನು ಇಂದು ಬಿಡುಗಡೆ ಮಾಡುತ್ತಿದೆ. ಈ ಫೋನ್ ಗಳು ಪ್ರೀಮಿಯಂ ಶ್ರೇಣಿಯಲ್ಲಿ ಬರುವುದರಿಂದ ವಿನ್ಯಾಸ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳಲ್ಲಿ ಹಲವಾರು ಅಪ್ಡೇಟ್ಗಳನ್ನು ಒಳಗೊಂಡಿವೆ.
ಫ್ಲಾಟ್ ಡಿಸ್ಪ್ಲೇ ಮತ್ತು ವಿನ್ಯಾಸ: OnePlus 13 ಸೀರಿಸ್‌ನ ಎರಡೂ ಫೋನ್ ಗಳಲ್ಲಿ ಹೊಸ ಫ್ಲಾಟ್ ಡಿಸ್ಪ್ಲೇ ಆಗಿದ್ದು, ಇದು ಹಳೆಯ ಕರ್ವ್ಡ್ ಡಿಸ್ಪ್ಲೇಗೆ ಬದಲಾವಣೆ ಆಗಿದೆ. ಕ್ಯಾಮೆರಾ ಮಾಸ್ಕ್ಯುಲರ್ ವಿನ್ಯಾಸವು ಹೊಸ ಫೋನ್ ಗಳಲ್ಲಿ ವೃತ್ತಾಕಾರವಾಗಿದೆ ಮತ್ತು ಫೋನ್ ಫ್ರೇಮ್ ಸಂಪರ್ಕಿಸುವ ವಿನ್ಯಾಸವನ್ನು ತೆಗೆದುಹಾಕಲಾಗಿದೆ. OnePlus 13 ವೀಗನ್ ಲೇದರ್ ಮತ್ತು ಗ್ಲಾಸ್ ಫಿನಿಶಿಂಗ್‌ನಲ್ಲಿ ಲಭ್ಯವಿದ್ದು, IP68 ಮತ್ತು IP69 ರೇಟಿಂಗ್ ಹೊಂದಿದೆ.
ಬ್ಯಾಟರಿ ಮತ್ತು ಸಾಫ್ಟ್ವೇರ್: ಎರಡೂ ಫೋನ್ ಗಳು 6,000mAh ಬ್ಯಾಟರಿಯನ್ನು ಹೊಂದಿದ್ದು, ಸ್ಪೀಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಗಳು Android 15 ಆಧಾರಿತ ಆಕ್ಸಿಜನ್ OS15 ನೊಂದಿಗೆ ಕಾರ್ಯನಿರ್ವಹಿಸುತ್ತವೆ. OnePlus 13 ನಾಲ್ಕು ವರ್ಷಗಳ Android ಅಪ್ಡೇಟ್ ಮತ್ತು ಐದು ವರ್ಷಗಳ ಭದ್ರತಾ ಅಪ್ಡೇಟ್ ಪಡೆಯಲಿದೆ.
ಟ್ರಿಪಲ್ ಕ್ಯಾಮೆರಾ ಸೆಟಪ್: OnePlus 13 50MP ಪ್ರಾಥಮಿಕ ಸೆನ್ಸಾರ್, 50MP ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. OnePlus 13R 50MP ಪ್ರಾಥಮಿಕ ಸೆನ್ಸಾರ್, 50MP ಟೆಲಿಫೋಟೋ ಲೆನ್ಸ್ ಮತ್ತು 8MP ಅಲ್ಟ್ರಾ-ವೈಡ್ ಸೆನ್ಸಾರ್ ಹೊಂದಿರಬಹುದು.
ಬೆಲೆ: OnePlus 13 ನ ಬೆಲೆ 67,000 – 70,000 ರೂ. ಆಗಿರಬಹುದು, ಆದರೆ OnePlus 13R ಕಡಿಮೆ ಬೆಲೆಗೆ, 50,000 ರೂ. ಇರುತ್ತದೆ.