New Delhi: ದೇಶದ ನಾಗರಿಕರನ್ನು ರಕ್ಷಿಸುವುದರ ಜೊತೆಗೆ ನವೀನತೆಯನ್ನು ಉತ್ತೇಜಿಸುವ ಉದ್ದೇಶದಿಂದ “ಆನ್ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ – 2025” ಅನ್ನು ಲೋಕಸಭೆ ಅಂಗೀಕರಿಸಿದೆ.
- ಮಸೂದೆ ಉದ್ದೇಶ
- ಸುರಕ್ಷಿತ ಮತ್ತು ಸಕಾರಾತ್ಮಕ ಆನ್ಲೈನ್ ಆಟಗಳಿಗೆ ಉತ್ತೇಜನ
- ಆರ್ಥಿಕ ನಷ್ಟ ಉಂಟುಮಾಡುವ ಮನಿ ಗೇಮ್ಗಳ ಸಂಪೂರ್ಣ ನಿಷೇಧ
- ಯುವಕರನ್ನು ಜೂಜಾಟ ಮತ್ತು ವ್ಯಸನದಿಂದ ರಕ್ಷಿಸುವುದು
ಪ್ರೋತ್ಸಾಹಿತ ವಿಭಾಗಗಳು
- ಇ-ಸ್ಪೋರ್ಟ್ಸ್
- ಕಾನೂನುಬದ್ಧ ಕ್ರೀಡೆಯಾಗಿ ಮಾನ್ಯತೆ
- ಕಾರ್ಯಕ್ರಮಗಳಿಗೆ ಮಾರ್ಗಸೂಚಿ, ಮಾನದಂಡ
- ತರಬೇತಿ ಕೇಂದ್ರಗಳು, ಸಂಶೋಧನಾ ಕೇಂದ್ರಗಳು ಸ್ಥಾಪನೆ
- ಜಾಗೃತಿ ಅಭಿಯಾನ ಮತ್ತು ಕ್ರೀಡಾ ನೀತಿಗಳಲ್ಲಿ ಏಕೀಕರಣ
- ಸಾಮಾಜಿಕ ಮತ್ತು ಶೈಕ್ಷಣಿಕ ಆಟಗಳು
- ಕೇಂದ್ರ ಸರ್ಕಾರದಿಂದ ನೋಂದಣಿ, ನಿಯಂತ್ರಣ
- ಸುರಕ್ಷಿತ, ವಯೋಮಾನದ ಆಟಗಳ ಅಭಿವೃದ್ಧಿ
- ಮನರಂಜನೆ, ಕೌಶಲ್ಯಾಭಿವೃದ್ಧಿ, ಡಿಜಿಟಲ್ ಸಾಕ್ಷರತೆಗೆ ಉತ್ತೇಜನ
ನಿಷೇಧಿತ ವಿಭಾಗಗಳು
- Online ಮನಿ ಗೇಮ್ ಗಳ ಸಂಪೂರ್ಣ ನಿಷೇಧ
- ಜಾಹೀರಾತು, ಪ್ರಚಾರ ಮತ್ತು ಹಣಕಾಸು ವ್ಯವಹಾರಗಳ ನಿಷೇಧ
- ಅಕ್ರಮ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ನಿರ್ಬಂಧ
- ಕೇಂದ್ರ ಸರ್ಕಾರ ರಾಷ್ಟ್ರೀಯ ಮಟ್ಟದ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ
ಮಸೂದೆ ಪ್ರಯೋಜನಗಳು
- ಆರ್ಥಿಕ ಬೆಳವಣಿಗೆ: ಗೇಮಿಂಗ್ ರಫ್ತು, ಉದ್ಯೋಗ ಮತ್ತು ನವೀನತೆಯಲ್ಲಿ ಭಾರತಕ್ಕೆ ಅವಕಾಶ
- ಯುವಕರ ಸಬಲೀಕರಣ: ಇ-ಸ್ಪೋರ್ಟ್ಸ್ ಹಾಗೂ ಕೌಶಲ್ಯ ಆಟಗಳಿಂದ ಸೃಜನಶೀಲತೆ ಬೆಳೆಸುವುದು
- ಸುರಕ್ಷಿತ ಸಮಾಜ: ಮನಿ ಗೇಮಿಂಗ್ ವ್ಯಸನ, ಆರ್ಥಿಕ ನಷ್ಟ, ಆತ್ಮಹತ್ಯೆ ತಡೆಯುವುದು
- ಜಾಗತಿಕ ನಾಯಕತ್ವ: ಜವಾಬ್ದಾರಿಯುತ ಗೇಮಿಂಗ್‌ನಲ್ಲಿ ಭಾರತವನ್ನು ಮುಂಚೂಣಿ ದೇಶವಾಗಿಸುವುದು
ಈ ರೀತಿಯಾಗಿ ಮಸೂದೆ, ಹಾನಿಕಾರಕ ಆಟಗಳನ್ನು ತಡೆದು, ಸುರಕ್ಷಿತ ಮತ್ತು ಸೃಜನಶೀಲ ಗೇಮಿಂಗ್ ಪರಿಸರವನ್ನು ನಿರ್ಮಿಸುವತ್ತ ಗಮನ ಹರಿಸಿದೆ.