ಮಂಡ್ಯ (Mandya) ಜಿಲ್ಲೆಯ ಜನರು ಕಷ್ಟಪಟ್ಟು ಕಬ್ಬು ಬೆಳೆಸಿ ಎಲ್ಲರಿಗೂ ಸಿಹಿ ನೀಡುತ್ತಾರೆ. ಇವರನ್ನು “ಛತ್ರಿಗಳು” ಎಂದು ಕರೆಯುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಮಂಡ್ಯದ ಜನರ ಬಗ್ಗೆ ಮಾಡಿದ ಹೇಳಿಕೆಯಿಂದ ಸಕ್ಕರೆ ನಾಡಿನಲ್ಲಿ ಭಾರೀ ಅಸಮಾಧಾನ ಉಂಟಾಗಿದೆ. ಹಲವು ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು.
ಕಬ್ಬಿನ ಗದ್ದೆಗಳಲ್ಲಿ ನಿಂತ ಪ್ರತಿಭಟನಾಕಾರರು ಛತ್ರಿಗಳನ್ನು ಹಿಡಿದುಕೊಂಡು ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಾದ್ಯಂತ ಡಿಕೆಶಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.