back to top
20.8 C
Bengaluru
Sunday, August 31, 2025
HomeSportsCricketPakistan Cricket: ಟಿಮ್ ನೀಲ್ಸನ್ ಹುದ್ದೆಯಿಂದ ವಜಾ, ಗಿಲ್ಲೆಸ್ಪಿ ಭವಿಷ್ಯವೂ ಅನಿಶ್ಚಿತ

Pakistan Cricket: ಟಿಮ್ ನೀಲ್ಸನ್ ಹುದ್ದೆಯಿಂದ ವಜಾ, ಗಿಲ್ಲೆಸ್ಪಿ ಭವಿಷ್ಯವೂ ಅನಿಶ್ಚಿತ

- Advertisement -
- Advertisement -

ಪಾಕಿಸ್ತಾನ (Pakistan) ಕ್ರಿಕೆಟ್ ಮಂಡಳಿ (PCB-Pakistan Cricket Board) ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಸಹಾಯಕ ಕೋಚ್ ಟಿಮ್ ನೀಲ್ಸನ್ (Tim Nielson) ಅವರನ್ನು ಅವರ ಹುದ್ದೆಯಿಂದ ವಜಾ ಮಾಡಿದೆ. ಈ ನಿರ್ಧಾರವು ದಕ್ಷಿಣ ಆಫ್ರಿಕಾದೊಂದಿಗೆ ನಡೆಯುವ ಮಹತ್ವದ ಟೆಸ್ಟ್ ಸರಣಿಗೆ ಕೇವಲೇ 2 ವಾರಗಳ ಮೊದಲು ನಡೆದಿದೆ.

ಕಳೆದ ಆಗಸ್ಟ್‌ನಲ್ಲಿ ಟೆಸ್ಟ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದ ನೀಲ್ಸನ್, ಪಾಕಿಸ್ತಾನದ ಟೆಸ್ಟ್ ತರಬೇತುದಾರ ಜೇಸನ್ ಗಿಲ್ಲೆಸ್ಪಿಗೆ (Jason Gillespie) ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಆದರೀಗ ಅವರನ್ನು ಈ ಹುದ್ದೆಯಿಂದ ವಜಾಗೊಳಿಸಲಾಗಿದೆ. ನೀಲ್ಸನ್ ಈ ಹಿಂದೆ ತನ್ನ ಒಪ್ಪಂದವನ್ನು ವಿಸ್ತರಿಸುವ ನಿರೀಕ್ಷೆ ವ್ಯಕ್ತಪಡಿಸಿದ್ದರೂ, ಮಂಡಳಿ ಅವರ ಸೇವೆಗಳನ್ನು ಮುಂದುವರೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ನಿರ್ಧಾರದಿಂದ, ಮುಖ್ಯ ತರಬೇತುದಾರ ಜೇಸನ್ ಗಿಲ್ಲೆಸ್ಪಿಯವರ ಭವಿಷ್ಯವೂ ಅನಿಶ್ಚಿತವಾಗಿದೆ. ಗಿಲ್ಲೆಸ್ಪಿ, ತಮ್ಮ ಸಹಾಯಕ ಕೋಚಿನ ನಿರ್ಧಾರವನ್ನು ತಿಳಿಯದೇ, ಪಾಕಿಸ್ತಾನ ತಂಡದೊಂದಿಗೆ ಮುಂದುವರಿಯುವ ಬಗ್ಗೆ ಚಿಂತನೆ ವ್ಯಕ್ತಪಡಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page