ಮುಂದಿನ ತಿಂಗಳು UAE ಯಲ್ಲಿ ನಡೆಯಲಿರುವ ಏಷ್ಯಾಕಪ್ (Asia Cup) ಕ್ರಿಕೆಟ್ ಟೂರ್ನಿಗಾಗಿ ಪಾಕಿಸ್ತಾನ ತನ್ನ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸಲ್ಮಾನ್ ಅಲಿ ಆಘಾ ನಾಯಕತ್ವ ವಹಿಸಿಕೊಂಡಿದ್ದು, ಮೊಹಮ್ಮದ್ ಹ್ಯಾರಿಸ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ಹಸನ್ ಅಲಿ ಪ್ರಮುಖ ಆಟಗಾರರಾಗಿ ಸೇರಿದ್ದಾರೆ.
ಇಬ್ಬರು ಹಿರಿಯ ಆಟಗಾರರಿಗೆ ಗೇಟ್ ಪಾಸ್: ಇತ್ತೀಚೆಗೆ ಕಳಪೆ ಪ್ರದರ್ಶನ ನೀಡಿರುವ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಅವರನ್ನು ಈ ಬಾರಿ ತಂಡದಿಂದ ಕೈಬಿಡಲಾಗಿದೆ. ಬದಲಿಗೆ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ.
ಏಷ್ಯಾಕಪ್ಗೂ ಮೊದಲು ಪಾಕಿಸ್ತಾನ, ಯುಎಇ ಮತ್ತು ಅಫ್ಘಾನಿಸ್ತಾನದ ನಡುವಿನ ತ್ರಿಕೋನ ಸರಣಿ ನಡೆಯಲಿದೆ. ಇದೇ ತಂಡ ತ್ರಿಕೋನ ಸರಣಿಯಲ್ಲೂ ಆಡಲಿದೆ. ಈ ಸರಣಿ ಆಗಸ್ಟ್ 29 ರಿಂದ ಸೆಪ್ಟೆಂಬರ್ 7ರವರೆಗೆ ನಡೆಯಲಿದೆ.
ಏಷ್ಯಾಕಪ್ ನಲ್ಲಿ ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 12ರಂದು ಯುಎಇ ವಿರುದ್ಧ ಆಡಲಿದೆ.
ಟೂರ್ನಿಯ ಪ್ರಮುಖ ಪಂದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಸೆಪ್ಟೆಂಬರ್ 14ರಂದು ದುಬೈನಲ್ಲಿ ನಡೆಯಲಿದೆ. ಆದರೆ, ಭಾರತ ಭಾಗವಹಿಸುವುದೇ ಎಂಬುದು ಇನ್ನೂ ಅನುಮಾನವಾಗಿದೆ.
ಪಾಕಿಸ್ತಾನ ತಂಡ (Asia Cup & Tri-Series 2025)
- ಸಲ್ಮಾನ್ ಅಲಿ ಅಘಾ (ನಾಯಕ)
- ಅಬ್ರಾರ್ ಅಹ್ಮದ್
- ಫಹೀಮ್ ಅಶ್ರಫ್
- ಫಖರ್ ಜಮಾನ್
- ಹಸನ್ ನವಾಜ್
- ಹುಸೇನ್ ತಲತ್
- ಖುಷ್ದಿಲ್ ಶಾ
- ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್)
- ಮೊಹಮ್ಮದ್ ನವಾಜ್
- ಮೊಹಮ್ಮದ್ ವಾಸಿಮ್ ಜೂನಿಯರ್
- ಶಾಹೀನ್ ಶಾ ಅಫ್ರಿದಿ
- ಹ್ಯಾರಿಸ್ ರೌಫ್
- ಹಸನ್ ಅಲಿ
- ಸುಫ್ಯಾನ್ ಮೋಕಿಮ್
ಏಷ್ಯಾಕಪ್ 2025 ವೇಳಾಪಟ್ಟಿ
- ಸೆ.9: ಅಫ್ಘಾನಿಸ್ತಾನ vs ಹಾಂಗ್ ಕಾಂಗ್ (ಅಬುಧಾಬಿ)
- ಸೆ.10: ಭಾರತ vs ಯುಎಇ (ದುಬೈ)
- ಸೆ.11: ಬಾಂಗ್ಲಾದೇಶ vs ಹಾಂಗ್ ಕಾಂಗ್ (ಅಬುಧಾಬಿ)
- ಸೆ.12: ಪಾಕಿಸ್ತಾನ vs ಓಮನ್ (ದುಬೈ)
- ಸೆ.13: ಬಾಂಗ್ಲಾದೇಶ vs ಶ್ರೀಲಂಕಾ (ಅಬುಧಾಬಿ)
- ಸೆ.14: ಭಾರತ vs ಪಾಕಿಸ್ತಾನ (ದುಬೈ)
- ಸೆ.15: ಯುಎಇ vs ಓಮನ್ (ಅಬುಧಾಬಿ), ಶ್ರೀಲಂಕಾ vs ಹಾಂಗ್ ಕಾಂಗ್ (ದುಬೈ)
- ಸೆ.16: ಬಾಂಗ್ಲಾದೇಶ vs ಅಫ್ಘಾನಿಸ್ತಾನ (ಅಬುಧಾಬಿ)
- ಸೆ.17: ಪಾಕಿಸ್ತಾನ vs ಯುಎಇ (ದುಬೈ)
- ಸೆ.18: ಶ್ರೀಲಂಕಾ vs ಅಫ್ಘಾನಿಸ್ತಾನ (ಅಬುಧಾಬಿ)
- ಸೆ.19: ಭಾರತ vs ಓಮನ್ (ಅಬುಧಾಬಿ)
- ಸೂಪರ್ ಫೋರ್: ಸೆ.20ರಿಂದ 26ರವರೆಗೆ
- ಫೈನಲ್: ಸೆಪ್ಟೆಂಬರ್ 28, ದುಬೈ