Haridwar: ಪತಂಜಲಿ ವಿಶ್ವವಿದ್ಯಾಲಯ, ಪತಂಜಲಿ ಸಂಶೋಧನಾ ಸಂಸ್ಥೆ (Patanjali University) ಮತ್ತು ನವದೆಹಲಿಯ ಸಂಸ್ಕೃತ ವಿಶ್ವವಿದ್ಯಾಲಯ ಸೇರಿ ಎರಡು ದಿನಗಳ ಅನಾಮಯಮ್ ಅಂತರರಾಷ್ಟ್ರೀಯ ಸಮ್ಮೇಳನವನ್ನು ಹರಿದ್ವಾರದಲ್ಲಿ ಜಂಟಿಯಾಗಿ ಆಯೋಜಿಸಲಾಯಿತು. ಈ ಸಮ್ಮೇಳನದ ಉದ್ದೇಶ ಆಯುರ್ವೇದ ಹಾಗೂ ಆಧುನಿಕ ವೈದ್ಯಕೀಯವನ್ನು ಸೇರಿಸಿ, ಸಮನ್ವಯ ಸಾಧಿಸುವುದು.
ಈ ಸಮ್ಮೇಳನದಲ್ಲಿ 16 ರಾಜ್ಯಗಳಿಂದ 200ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದು, ಒಟ್ಟು 300ಕ್ಕೂ ಹೆಚ್ಚು ಮಂದಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾಲ್ಗೊಂಡರು. ದೇಶದ ಪ್ರಮುಖ ವೈದ್ಯರು, ಸಂಶೋಧಕರು, ತಜ್ಞರು ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿಶ್ವವಿದ್ಯಾಲಯದ ಕುಲಪತಿ ಬಾಬಾ ರಾಮದೇವ್ ಮಾತನಾಡುತ್ತಾ, ಪತಂಜಲಿ ಆಯುರ್ವೇದ ಆಸ್ಪತ್ರೆಯಲ್ಲಿ ಟಾಟಾ ಕ್ಯಾನ್ಸರ್ ಆಸ್ಪತ್ರೆ, ಏಮ್ಸ್ ಹಾಗೂ ಗಂಗಾ ರಾಮ್ ಆಸ್ಪತ್ರೆಗಳ ಸಹಕಾರದಿಂದ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು. “ವೈದ್ಯಕೀಯ ವಿಜ್ಞಾನವು ಜನಸಾಮಾನ್ಯರ ಹಿತಕ್ಕಾಗಿ ಇರಬೇಕು, ಲಾಭಕ್ಕಾಗಿ ಅಲ್ಲ” ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಆಯುರ್ವೇದ ಕುರಿತ ಮೂರು ಪುಸ್ತಕಗಳು ಬಿಡುಗಡೆಯಾದವು. ಈ ಸಂದರ್ಭ, IIT ರೋಪರ್ ಮತ್ತು ಪತಂಜಲಿ ವಿವಿಯ ನಡುವಿನ ಸಂಶೋಧನಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಸಮ್ಮೇಳನದ ಮೊದಲ ಅಧಿವೇಶನವನ್ನು ಡಾ. ಬಿ.ಎನ್. ಗಂಗಾಧರ್ ಮತ್ತು ಪ್ರೊ. ಗೋಪಾಲ್ ನಂದಾ ಉದ್ಘಾಟಿಸಿದರು. ಹಲವು ವೈದ್ಯಕೀಯ ಸಂಸ್ಥೆಗಳ ಪ್ರಾಧ್ಯಾಪಕರು ಸಿಒಪಿಡಿ, ಫಿಸ್ಟುಲಾ ಮತ್ತು ರೋಗ ತಡೆ ವಿಧಾನಗಳ ಬಗ್ಗೆ ತಮ್ಮ ಸಂಶೋಧನೆಗಳನ್ನು ಮಂಡಿಸಿದರು. AIIMS, ಪತಂಜಲಿ, ಜಾದವ್ಪುರ ವಿಶ್ವವಿದ್ಯಾಲಯದ ಹಲವು ತಜ್ಞರು ಪ್ರಸ್ತುತಿಗಳನ್ನು ನೀಡಿದರು.
ಪೋಸ್ಟರ್ ಪ್ರಸ್ತುತಿಗಳನ್ನು ಡಾ. ಪ್ರದೀಪ್ ನಯನ್ ಮತ್ತು ತಂಡ ನಡೆಸಿಕೊಟ್ಟರು. ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗುವಿಕೆ, ಪತಂಜಲಿ ವಿದ್ಯಾರ್ಥಿಗಳಿಂದ ಕುಲ್ ಗೀತ್ ಮತ್ತು ಧನ್ವಂತರಿ ವಂದನೆ ನಡೆಯಿತು. ಸ್ವಾಗತ ಭಾಷಣವನ್ನು ಡಾ. ಅನುರಾಗ್ ನೀಡಿದರು.