ಭಾರತದ ಹೊರಗಿನ ಮೊದಲ Indian Institute of Technology (IIT) ಕ್ಯಾಂಪಸ್ ಅನ್ನು ತಾಂಜಾನಿಯಾದ (Tanzania Zanzibar) ಜಂಜಿಬಾರ್‌ನಲ್ಲಿ ಸ್ಥಾಪಿಸುವ ಕುರಿತು ಜುಲೈ 5, 2023 ರಂದು, ಭಾರತದ ಶಿಕ್ಷಣ ಸಚಿವಾಲಯ, ಐಐಟಿ ಮದ್ರಾಸ್ ಮತ್ತು ತಾಂಜಾನಿಯಾದ ಜಾಂಜಿಬಾರ್‌ನ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಸಚಿವಾಲಯದ ನಡುವೆ ಜಾಂಜಿಬಾರ್ ಅಧ್ಯಕ್ಷರಾದ ಡಾ.ಹುಸೇನ್ ಅಲಿ ಮ್ವಿನಿ ಮತ್ತು ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರ ಸಮ್ಮುಖದಲ್ಲಿ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲಾಯಿತು.
ಈ ಕಾರ್ಯವು ಭಾರತ ಮತ್ತು ತಾಂಜಾನಿಯಾ ನಡುವಿನ ದೀರ್ಘಕಾಲದ ಸ್ನೇಹವನ್ನು ಪ್ರತಿಬಿಂಬಿಸುವುದಲ್ಲದೇ ಆಫ್ರಿಕಾ ಮತ್ತು ವಿಶ್ವದ ದಕ್ಷಿಣ ಪ್ರಾಂತ್ಯದೊಂದಿಗೆ ಸಂಪರ್ಕವನ್ನು ಸಾಧಿಸಲು ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ತಾಂಜಾನಿಯಾದ ಭಾರತೀಯ ಹೈಕಮಿಷನರ್ ಬಿನಯಾ ಶ್ರೀಕಾಂತ ಪ್ರಧಾನ್, IIT Madras ನ ಜಾಗತಿಕ ಎಂಗೇಜ್‌ಮೆಂಟ್ ಡೀನ್ ಪ್ರೊ.ರಘುನಾಥನ್ ರೆಂಗಸ್ವಾಮಿ ಮತ್ತು ಜಾಂಜಿಬಾರ್‌ನ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಸಚಿವಾಲಯದ ಹಂಗಾಮಿ ಪ್ರಧಾನ ಕಾರ್ಯದರ್ಶಿ ಶ್ರೀ ಖಾಲಿದ್ ಮಸೂದ್ ವಜೀರ್ ತಮ್ಮ ಸಂಸ್ಥೆಗಳ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು.