Pavagada, Tumkur (Tumakuru) : ಪಾವಗಡ ತಾಲ್ಲೂಕಿನ ಕೆ.ಸೇವಾಲಾಪುರದಲ್ಲಿ (K.Sevalapura) ಭಾನುವಾರ ಮಹಾಗಣಪತಿ, ತೊಳಜಾಸತ್ತಿ (ಮಹಾಲಕ್ಷ್ಮಿ) ಪ್ರತಿಷ್ಠಾಪನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ನೆರೆವೇರಿಸಿ ಮಾತನಾಡಿದ ದಾಬಸ್ ಪೇಟೆ ವನಕಲ್ ಮಲ್ಲೇಶ್ವರ ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ “ಬುಡಕಟ್ಟು ಸಮಾಜದ ಏಳ್ಗೆಗೆ ಶಿಕ್ಷಣ ಮುಖ್ಯ. ಪ್ರತಿಯೊಬ್ಬರೂ ಶ್ರಮ ಜೀವಿಗಳಾಗಿ ಬದುಕಿ ಪ್ರಾಮಾಣಿಕ ಜೀವನ ನಡೆಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಬಂಜಾರ ಗುರು ಪೀಠದ ಸರ್ದಾರ್ ಸಂತ ಸೇವಾಲಾಲ್ ಸ್ವಾಮೀಜಿ, ದೊಡ್ಡಬಳ್ಳಾಪುರದ ವಾಲ್ಮೀಕಿ ಗುರುಕುಲ ಮಠದ ವಾಲ್ಮೀಕಿ ಬ್ರಹ್ಮಾನಂದ ಸ್ವಾಮೀಜಿ, ಸಂಚಾಲಕ ಆರ್.ಪಿ.ಸಾಂಬಸದಾಶಿವ ರೆಡ್ಡಿ, ಚಿತ್ರದುರ್ಗ ಬಸವಶ್ರೀ ಮಠದ ಮೇದಾರ ಚೇತೇಶ್ವರ ಸ್ವಾಮೀಜಿ, ಸಂಘದ ಅಧ್ಯಕ್ಷ ಡಾ.ಡಿ.ಪರಮೇಶ್ವರನಾಯ್ಕ, ಎಸ್.ಕವಿತಾ, ನಾಗೇಂದ್ರನಾಯ್ಕ, ಜಯ ಕುಮಾರನಾಯ್ಕ, ಸುಬ್ರಾನಾಯ್ಕ, ಚಂದ್ರ ಶೇಖರ್ ನಾಯ್ಕ, ಶಿವನಾಯ್ಕ, ಧರ್ಮಾ ನಾಯ್ಕ, ಜಯಣ್ಣ ಉಪಸ್ಥಿತರಿದ್ದರು.