
Washington DC: ಅಮೆರಿಕದ ಯಶಸ್ವಿ ಪ್ರವಾಸವನ್ನು ಮುಗಿಸಿ, ಪ್ರಧಾನಿ ನರೇಂದ್ರ ಮೋದಿ (PM Modi) ನವದೆಹಲಿಗೆ ಮರಳಿದ್ದಾರೆ. ಈ ಭೇಟಿಯು ಅತ್ಯಂತ ಫಲಪ್ರದವಾಗಿತ್ತು ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ (External Affairs Ministry spokesperson Randhir Jaiswal) ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರ ಅಮೆರಿಕ ಪ್ರವಾಸ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಭೇಟಿಯ ವೇಳೆ ಪ್ರಧಾನಿ ಮೋದಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮತ್ತು ಉದ್ಯಮಿ ವಿವೇಕ್ ರಾಮಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದರು. ಶ್ವೇತಭವನದಲ್ಲಿ ನಡೆದ ಚರ್ಚೆಯಲ್ಲಿ ಭದ್ರತಾ ಸಹಕಾರ, ರಕ್ಷಣೆ, ವ್ಯಾಪಾರ, ಆರ್ಥಿಕತೆ, ತಂತ್ರಜ್ಞಾನ, ಇಂಧನ ಭದ್ರತೆ ಮತ್ತು ಜಾಗತಿಕ ವಿಚಾರಗಳ ಕುರಿತು ಚರ್ಚೆ ಮಾಡಲಾಯಿತು.
ಈ ಭೇಟಿಯು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ನಡೆಯಿತು. ಇದು ಟ್ರಂಪ್ ಅವರ ಎರಡನೇ ಅವಧಿಯ ನಂತರ ಪ್ರಧಾನಿ ಮೋದಿಯ ಮೊದಲ ಭೇಟಿ. ಇಬ್ಬರು ನಾಯಕರೂ ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಬಲಪಡಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ತಮ್ಮ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಟ್ರಂಪ್ ಶುಭ ಹಾರೈಸಿದರು.
ಅಮೆರಿಕ ಮತ್ತು ಭಾರತದ ಸಂಬಂಧ ಹೊಸ ಎತ್ತರಕ್ಕೆ ಹಾರಲಿದೆ ಎಂಬ ನಂಬಿಕೆಯನ್ನು ಈ ಭೇಟಿಯು ಉಂಟುಮಾಡಿದೆ ಎಂದು ವರದಿಗಳು ಹೇಳುತ್ತಿವೆ.