back to top
26.7 C
Bengaluru
Tuesday, July 22, 2025
HomeIndiaBangladesh ವಿಮಾನ ದುರಂತಕ್ಕೆ PM Modi ಸಂತಾಪ – "ಸಹಾಯಕ್ಕೆ ಭಾರತ ಸಿದ್ಧ"

Bangladesh ವಿಮಾನ ದುರಂತಕ್ಕೆ PM Modi ಸಂತಾಪ – “ಸಹಾಯಕ್ಕೆ ಭಾರತ ಸಿದ್ಧ”

- Advertisement -
- Advertisement -

Dhaka: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಮೈಲ್ಸ್ಟೋನ್ ಶಾಲೆ ಮತ್ತು ಕಾಲೇಜು ಆವರಣದಲ್ಲಿ ಬಾಂಗ್ಲಾದೇಶ (Bangladesh) ವಾಯುಪಡೆಯ ತರಬೇತಿ ವಿಮಾನ F-7 BGI ಅಪಘಾತಕ್ಕೀಡಾಗಿದೆ. ಈ ಭೀಕರ ದುರಂತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದು, 171ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಸುಮಾರು 83 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಭವಿಸಿದ ಸಮಯದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದು, “ಈ ಅಪಘಾತದಲ್ಲಿ ಹಲವಾರು ಯುವ ವಿದ್ಯಾರ್ಥಿಗಳು ಹಾಗೂ ನಿರಪರಾಧಿಗಳು ಸಾವನ್ನಪ್ಪಿದ್ದು ನೋವಿನ ಸಂಗತಿಯಾಗಿದೆ. ಗಾಯಗೊಂಡವರಿಗೆ ಶೀಘ್ರ ಚೇತರಿಕೆ ಕೋರುತ್ತೇವೆ. ಭಾರತ ಬಾಂಗ್ಲಾದೇಶದೊಂದಿಗೆ ಇರುತ್ತದೆ. ಈ ಸಂಕಷ್ಟದ ಸಮಯದಲ್ಲಿ ನಾವು ಅಗತ್ಯವಿರುವ ಎಲ್ಲ ಸಹಾಯಕ್ಕೆ ಸಿದ್ಧರಿದ್ದೇವೆ” ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಮಿಲಿಟರಿ ಮತ್ತು ಅಗ್ನಿಶಾಮಕ ಇಲಾಖೆಯು ತುರ್ತು ನೆರವಿಗೆ ಧಾವಿಸಿದ್ದು, ರಾಷ್ಟ್ರೀಯ ಬರ್ನ್ ಮತ್ತು ಪ್ಲಾಸ್ಟಿಕ್ ಸರ್ಜರಿ ಆಸ್ಪತ್ರೆಯಲ್ಲಿ ತುರ್ತು ಸಂಪರ್ಕಕ್ಕೆ ಹಾಟ್‌ಲೈನ್ ವ್ಯವಸ್ಥೆ ಮಾಡಲಾಗಿದೆ.

ಈ ದುರಂತದ ಬಗ್ಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ವಾಯುಪಡೆ ಸಿಬ್ಬಂದಿ ಹಾಗೂ ಶಾಲಾ ಸಿಬ್ಬಂದಿಗೆ ಇದು ಭಾರೀ ನಷ್ಟವಾಗಿದೆ. ಈ ತೊಂದರೆಯನ್ನು ದೇಶ ಪೂರೈಸುವುದು ಬಹುಮುಖ್ಯ” ಎಂದು ಅವರು ಹೇಳಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page