Argentina: 57 ವರ್ಷಗಳ ಬಳಿಕ ಭಾರತದ ಪ್ರಧಾನಮಂತ್ರಿ ಮೊದಲ ಬಾರಿಗೆ ಅರ್ಜೆಂಟೀನಾಗೆ (Argentina) ದ್ವಿಪಕ್ಷೀಯ ಭೇಟಿ ನೀಡಿದ್ದು, ಈ ಐತಿಹಾಸಿಕ ಭೇಟಿಯು ಭಾರತ – ಅರ್ಜೆಂಟೀನಾ ಸಂಬಂಧಗಳನ್ನು ಬಲಪಡಿಸುವಂತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಐದು ದೇಶಗಳ ಪ್ರವಾಸದ ಭಾಗವಾಗಿ ಎರಡು ದಿನಗಳ ಅರ್ಜೆಂಟೀನಾ ಪ್ರವಾಸಕ್ಕಾಗಿ ಬ್ಯೂನಸ್ ಐರಿಸ್‌ಗೆ ಆಗಮಿಸಿದರು. ಬ್ಯೂನಸ್ ಐರಿಸ್‌ನ ಎಝೀಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಔಪಚಾರಿಕವಾಗಿ ಸ್ವಾಗತಿಸಲಾಯಿತು.
ಈ ಭೇಟಿಯ ಮುಖ್ಯ ಉದ್ದೇಶಗಳು
- ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲಿಯವರೊಂದಿಗೆ ಸಭೆ ನಡೆಸುವುದು
- ಯೋಗ, ಆಯುರ್ವೇದ ಮತ್ತು ಭಾರತೀಯ ತತ್ವಶಾಸ್ತ್ರದ ಮೂಲಕ ಜನರಿಂದ ಜನಕ್ಕೆ ಸಂಪರ್ಕ ಬಲಪಡಿಸುವುದು
- ರಕ್ಷಣಾ ಉತ್ಪಾದನೆ, ಬಾಹ್ಯಾಕಾಶ, ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವುದು
ಅರ್ಜೆಂಟೀನಾದಿಂದ ಭಾರತಕ್ಕೆ ಆಗುವ ಲಾಭಗಳು
- ಅರ್ಜೆಂಟೀನಾದಲ್ಲಿ ಲಿಥಿಯಂ, ತಾಮ್ರ, ಶೇಲ್ ಅನಿಲ, ಶೇಲ್ ತೈಲದ ಸಮೃದ್ಧ ನಿಕ್ಷೇಪಗಳಿವೆ
- ಇದು ಭಾರತಕ್ಕೆ ಇಂಧನ ಭದ್ರತೆ ಮತ್ತು ಶುದ್ಧ ಇಂಧನ ಪರಿವರ್ತನೆಗೆ ಸಹಾಯ ಮಾಡಬಹುದು
- ಲಿಥಿಯಂ ಎಲೆಕ್ಟ್ರಿಕ್ ವಾಹನಗಳು, ಫೋನ್ಗಳು, ಲ್ಯಾಪ್‌ಟಾಪ್‌ಗಳು ಮುಂತಾದ ಪೋರ್ಟಬಲ್ ಸಾಧನಗಳಿಗೆ ಅತ್ಯಂತ ಮುಖ್ಯವಾದ ಖನಿಜ.
ಮೋದಿ ಅವರು ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರ ಜನರಲ್ ಜೋಸ್ ಡಿ ಸ್ಯಾನ್ ಮಾರ್ಟಿನ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು. ಆ ಬಳಿಕ ವಿವಿಧ ಅರ್ಜೆಂಟೀನಾ ಅಧಿಕಾರಿಗಳೊಂದಿಗೆ ಸಭೆಗಳಲ್ಲಿ ಭಾಗವಹಿಸಿ, ಅಧ್ಯಕ್ಷ ಮಿಲಿಯವರೊಂದಿಗೆ ಭೋಜನ ಸಭೆಯಲ್ಲಿ ಭಾಗವಹಿಸುವ ಯೋಜನೆಯೂ ಇದೆ.
ಈ ಭೇಟಿಯಿಂದ ಭಾರತ – ಅರ್ಜೆಂಟೀನಾ ಸಂಬಂಧಗಳಲ್ಲಿ ಹೊಸ ಅಧ್ಯಾಯ ಶುರುವಾಗಲಿದೆ ಎಂಬ ನಿರೀಕ್ಷೆ ಇದೆ.