ಕೇಂದ್ರ ಸರ್ಕಾರ (central government) COVID-19 ಸಮಯದಲ್ಲಿ ಬೀದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಬೆಂಬಲಿಸಲು ಪಿಎಂ ಸ್ವನಿಧಿ ಯೋಜನೆ ಅನ್ನು (PM SVANIDHI Yojana) ಪ್ರಾರಂಭಿಸಿದೆ. ಈ ಯೋಜನೆಯಡಿ ಆಧಾರ್ ಕಾರ್ಡ್ ಮೂಲಕ ಶ್ಯೂರಿಟಿ ಇಲ್ಲದೆ ಸಾಲ ಪಡೆಯುವ ವ್ಯವಸ್ಥೆ ಇದೆ.
ಯೋಜನೆಯ ಮುಖ್ಯ ಅಂಶಗಳು
- ಚಿಕ್ಕ ವ್ಯಾಪಾರಿಗಳಿಗೆ ಪ್ರಾರಂಭಿಕ ಸಾಲ: ಪ್ರಥಮ ಹಂತದಲ್ಲಿ ₹10,000 ಸಾಲ.
- ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ₹20,000 ಮತ್ತು ನಂತರ ₹50,000 ವರೆಗೆ ಸಾಲ ಪಡೆಯಲು ಅವಕಾಶ.
- ಸ್ಯೂರಿಟಿ ಅಗತ್ಯವಿಲ್ಲ: ಬೇರೆಯ ಸಾಲಗಳಂತಿಲ್ಲದೇ, ಯಾವುದೇ ಖಾತರಿಯ ಅಗತ್ಯವಿಲ್ಲ.
- ಆಧಾರ್ ಕಾರ್ಡ್ ಕಡ್ಡಾಯ.
- ಅರ್ಜಿ ಸಲ್ಲಿಸುವ ಪ್ರಕ್ರಿಯೆ: ನಗರ ಸ್ಥಳೀಯ ಸಂಸ್ಥೆಯಿಂದ ಶಿಫಾರಸು ಪತ್ರ ಪಡೆಯಬೇಕು.
- https://pmsvanidhi.mohua.gov.in ವೆಬ್‌ಸೈಟ್‌ನಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರದ (CSC) ಮೂಲಕ ಅರ್ಜಿ ಸಲ್ಲಿಸಬಹುದು.
- ಬಡ್ಡಿದರಗಳು: ವಾಣಿಜ್ಯ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿ ಚಾಲ್ತಿಯಲ್ಲಿರುವ ದರಗಳು ಅನ್ವಯಿಸಬಹುದು.
- NBFC ಮತ್ತು NBFC-MFIಗಳಿಗೆ RBI ಮಾರ್ಗಸೂಚಿಗಳ ಪ್ರಕಾರ ಬಡ್ಡಿದರಗಳು ನಿಗದಿಯಲ್ಲಿವೆ.
- ಪಾವತಿಗೆ ಸಮಯ: ಸಾಲವನ್ನು 12 ತಿಂಗಳೊಳಗೆ ಕಂತುಗಳಲ್ಲಿ ಮರುಪಾವತಿಸಬೇಕು.
- ಸಾಲ ಪಡೆದುಕೊಳ್ಳಲು ಮುಖ್ಯ ಷರತ್ತುಗಳು
- ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯ ಲಿಂಕ್ ಕಡ್ಡಾಯ.
- ಇ-ಕೆವೈಸಿ ಪ್ರಕ್ರಿಯೆಗಾಗಿ ಆಧಾರ್ ಮೌಲ್ಯೀಕರಣ ಅಗತ್ಯವಿದೆ.
ಈ ಯೋಜನೆಯಿಂದ ಚಿಕ್ಕ ಪುಟ್ಟ ವ್ಯಾಪಾರಸ್ಥರು ಮತ್ತು ಬೀದಿ ವ್ಯಾಪಾರಿಗಳಿಗೆ ಆರ್ಥಿಕ ಬೆಂಬಲ ದೊರೆಯುತ್ತದೆ.