Home Business PM SVANIDHI Yojana: 50,000 ಶ್ಯೂರಿಟಿ ರಹಿತ ಸಾಲ

PM SVANIDHI Yojana: 50,000 ಶ್ಯೂರಿಟಿ ರಹಿತ ಸಾಲ

PM SVANIDHI Yojana Scheme


ಕೇಂದ್ರ ಸರ್ಕಾರ (central government) COVID-19 ಸಮಯದಲ್ಲಿ ಬೀದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಬೆಂಬಲಿಸಲು ಪಿಎಂ ಸ್ವನಿಧಿ ಯೋಜನೆ ಅನ್ನು (PM SVANIDHI Yojana) ಪ್ರಾರಂಭಿಸಿದೆ. ಈ ಯೋಜನೆಯಡಿ ಆಧಾರ್ ಕಾರ್ಡ್ ಮೂಲಕ ಶ್ಯೂರಿಟಿ ಇಲ್ಲದೆ ಸಾಲ ಪಡೆಯುವ ವ್ಯವಸ್ಥೆ ಇದೆ.

ಯೋಜನೆಯ ಮುಖ್ಯ ಅಂಶಗಳು

  • ಚಿಕ್ಕ ವ್ಯಾಪಾರಿಗಳಿಗೆ ಪ್ರಾರಂಭಿಕ ಸಾಲ: ಪ್ರಥಮ ಹಂತದಲ್ಲಿ ₹10,000 ಸಾಲ.
  • ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ₹20,000 ಮತ್ತು ನಂತರ ₹50,000 ವರೆಗೆ ಸಾಲ ಪಡೆಯಲು ಅವಕಾಶ.
  • ಸ್ಯೂರಿಟಿ ಅಗತ್ಯವಿಲ್ಲ: ಬೇರೆಯ ಸಾಲಗಳಂತಿಲ್ಲದೇ, ಯಾವುದೇ ಖಾತರಿಯ ಅಗತ್ಯವಿಲ್ಲ.
  • ಆಧಾರ್ ಕಾರ್ಡ್ ಕಡ್ಡಾಯ.
  • ಅರ್ಜಿ ಸಲ್ಲಿಸುವ ಪ್ರಕ್ರಿಯೆ: ನಗರ ಸ್ಥಳೀಯ ಸಂಸ್ಥೆಯಿಂದ ಶಿಫಾರಸು ಪತ್ರ ಪಡೆಯಬೇಕು.
  • https://pmsvanidhi.mohua.gov.in ವೆಬ್‌ಸೈಟ್‌ನಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರದ (CSC) ಮೂಲಕ ಅರ್ಜಿ ಸಲ್ಲಿಸಬಹುದು.
  • ಬಡ್ಡಿದರಗಳು: ವಾಣಿಜ್ಯ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿ ಚಾಲ್ತಿಯಲ್ಲಿರುವ ದರಗಳು ಅನ್ವಯಿಸಬಹುದು.
  • NBFC ಮತ್ತು NBFC-MFIಗಳಿಗೆ RBI ಮಾರ್ಗಸೂಚಿಗಳ ಪ್ರಕಾರ ಬಡ್ಡಿದರಗಳು ನಿಗದಿಯಲ್ಲಿವೆ.
  • ಪಾವತಿಗೆ ಸಮಯ: ಸಾಲವನ್ನು 12 ತಿಂಗಳೊಳಗೆ ಕಂತುಗಳಲ್ಲಿ ಮರುಪಾವತಿಸಬೇಕು.
  • ಸಾಲ ಪಡೆದುಕೊಳ್ಳಲು ಮುಖ್ಯ ಷರತ್ತುಗಳು
  • ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯ ಲಿಂಕ್ ಕಡ್ಡಾಯ.
  • ಇ-ಕೆವೈಸಿ ಪ್ರಕ್ರಿಯೆಗಾಗಿ ಆಧಾರ್ ಮೌಲ್ಯೀಕರಣ ಅಗತ್ಯವಿದೆ.

ಈ ಯೋಜನೆಯಿಂದ ಚಿಕ್ಕ ಪುಟ್ಟ ವ್ಯಾಪಾರಸ್ಥರು ಮತ್ತು ಬೀದಿ ವ್ಯಾಪಾರಿಗಳಿಗೆ ಆರ್ಥಿಕ ಬೆಂಬಲ ದೊರೆಯುತ್ತದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version