ಉಜ್ವಲ ಯೋಜನೆ 2.0 ದಲ್ಲಿ (Ujjwala Yojana) ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಉಚಿತ ಎಲ್.ಪಿ.ಜಿ (LPG) ಗ್ಯಾಸ್ ಸಂಪರ್ಕವನ್ನು ಒದಗಿಸಲಾಗುತ್ತಿದೆ. 2016ರಲ್ಲಿ ಆರಂಭವಾದ ಈ ಯೋಜನೆಯ ಮೊದಲ ಹಂತದಲ್ಲಿ ಲಕ್ಷಾಂತರ ಮಹಿಳೆಯರು ಲಾಭ ಪಡೆದಿದ್ದಾರೆ. ಈ ಯೋಜನೆಯ ಪ್ರಮುಖ ಗುರಿಯು ಗ್ರಾಮೀಣ ಮಹಿಳೆಯರನ್ನು ಅಡುಗೆಗಾಗಿ ದೂಷಿತ ವಾತಾವರಣದಿಂದ ರಕ್ಷಿಸಲು ಮತ್ತು ಆಧುನಿಕ ಎಲ್.ಪಿ.ಜಿ ಬಳಕೆಗೆ ಪ್ರೋತ್ಸಾಹಿಸಲು ಸಹಾಯ ಮಾಡುವುದು.
ಅರ್ಹತೆಗಳು
- ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
- ಈಗಾಗಲೇ ಯಾವುದೇ LPG ಕನೆಕ್ಷನ್ ಹೊಂದಿರಬಾರದು.
- 18 ವರ್ಷ ಅಥವಾ ಹೆಚ್ಚಿನ ವಯಸ್ಸಿನ ಮಹಿಳೆಯರು ಅರ್ಹರು.
- ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಅನ್ನ ಯೋಜನೆ (AAY) ಯೋಜನೆಗೆ ಸೇರಿರಬೇಕು.
- ಪರಿಶಿಷ್ಟ ಜಾತಿ/ಪಂಗಡ, ಆರ್ಥಿಕ ಹಿಂದುಳಿದ ವರ್ಗ (EBC), ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಫಲಾನುಭವಿಗಳು ಅರ್ಹರು.
ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್
- ಪಡಿತರ ಚೀಟಿ
- ಬಿಪಿಎಲ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಮೊಬೈಲ್ ಸಂಖ್ಯೆ
- ವಾಸಸ್ಥಳ ದೃಢೀಕರಣ
- ಪಾಸ್ಪೋರ್ಟ್ ಗಾತ್ರದ ಫೋಟೋ
ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
- https://pmuy.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
- “ಅಪ್ಲೈ ಫಾರ್ ನ್ಯೂ ಉಜ್ವಲ 2.0 ಕನೆಕ್ಷನ್” ಆಯ್ಕೆಮಾಡಿ.
- ಗ್ಯಾಸ್ ವಿತರಕರನ್ನು ಆಯ್ಕೆ ಮಾಡಿ (HP ಗ್ಯಾಸ್, ಭಾರತ್ ಗ್ಯಾಸ್, ಅಥವಾ ಇಂಡೇನ್ ಗ್ಯಾಸ್).
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಹಾಗು ಆಧಾರ್ ಮತ್ತು ಬ್ಯಾಂಕ್ ಖಾತೆಯ ಪ್ರಕಾರ ವಿವರಗಳನ್ನು ನಮೂದಿಸಿ.
- ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
- “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.
ಯೋಜನೆಯ ಸಂಬಂಧ ಯಾವುದೇ ಸಮಸ್ಯೆಗಳಿಗೆ, ಉಜ್ವಲ ಯೋಜನೆ ಸಹಾಯವಾಣಿ ಸಂಪರ್ಕಿಸಿ.
- -ಸಹಾಯವಾಣಿ ಸಂಖ್ಯೆ: 1800-266-6696
- -LPG ತುರ್ತು ಸಹಾಯವಾಣಿ: 1906
ಉಜ್ವಲ ಯೋಜನೆ 2.0 ಯೋಜನೆಯು ಗ್ರಾಮೀಣ ಮತ್ತು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಮಹಿಳೆಯರಿಗೆ ಮಹತ್ವದ ನೆರವಾಯಿತು. ಈ ಯೋಜನೆಯ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳ ಸಮರ್ಪಕ ಉಪಯೋಗವನ್ನು ಗ್ರಾಮೀಣ ಮಹಿಳೆಯರು ಮಾಡಿಕೊಳ್ಳಬಹುದು.