ಭಾರತದಲ್ಲಿ ಆಟೋ ಉದ್ಯಮ (auto industry) ವಿಶ್ವವೇ ತಿರುಗಿ ನೋಡುವ ಮಟ್ಟಕ್ಕೆ ಬೆಳೆದಿದೆ. ಸದ್ಯ ಭಾರತೀಯರಿಗೆ ಸುಲಭ ರೀತಿಯಲ್ಲಿ EMI ಆಯ್ಕೆ ನೀಡಿ ಕಾರು ಖರೀದಿಸುವ ಸೌಲಭ್ಯವನ್ನು ಹಲವು ಬ್ರಾಂಡ್ಗಳು (brands) ಮಾಡಿಕೊಟ್ಟಿವೆ. ಇಂದು ಕೇವಲ 4 ಲಕ್ಷಕ್ಕೆ ಮಾರುತಿ ಸುಜುಕಿ (Maruti Suzuki) ಕಾರುಗಳನ್ನು ನೀಡುತ್ತಿದೆ.
ಸಣ್ಣ ಕುಟುಂಬಕ್ಕೆ ಹಾಗೂ ಸಿಟಿಯಲ್ಲಿ ಓಡಾಡುವವರಿಗೆ ಒಳ್ಳೆಯ ಆಯ್ಕೆಯೆಂದು ಹೇಳಬಹುದು. ಸದ್ಯ ಟಾಟಾ, (Tata) ಮಾರುತಿ,( Maruti) ಹ್ಯುಂಡೈ, (Hyundai) ಎಂಜಿ ಬ್ರಾಂಡ್ಗಳಿಂದ (MG brand) ಭಾರತದಲ್ಲಿ ಹಬ್ಬದ ಸೀಸನ್ಗೆ ಬೆಸ್ಟ್ ಆಫರ್ಗಳ (festive season offers) ಮೂಲಕ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರುಗಳನ್ನು ನೀಡುತ್ತಿದೆ.
Maruti Suzuki Swift:
ಮಾರುತಿ ಸುಜುಕಿ ಸ್ವಿಫ್ಟ್ ಭಾರತದ ಅತ್ಯಂತ ಜನಪ್ರಿಯ ಹ್ಯಾಚ್ಬ್ಯಾಕ್ಗಳಲ್ಲಿ (hatchback) ಒಂದಾಗಿದೆ. ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift )ಈಗ 4 ಸಿಲಿಂಡರ್ ಪೆಟ್ರೋಲ್ ಮೋಟರ್ (cylinder petrol motor ) ಬದಲಿಗೆ 3 ಸಿಲಿಂಡರ್ ಎಂಜಿನ್ನೊಂದಿಗೆ ಬರುತ್ತದೆ.
ಇದು ಹೊಸ ವಿನ್ಯಾಸ, ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳು ಮತ್ತು ಸಂಪೂರ್ಣವಾಗಿ ನವೀಕರಿಸಿದ ಎಂಜಿನ್ನೊಂದಿಗೆ ಬರುತ್ತದೆ. ಹಾಗೇಯೇ ಇದು ಕೂಡ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಪವರ್ಫುಲ್ ಕಾರಾಗಿದೆ.
Tata Punch:
ಟಾಟಾ ಪಂಚ್ ಸಬ್ ಕಾಂಪ್ಯಾಕ್ಟ್ SUVಯಾಗಿದ್ದು, ಪೆಟ್ರೋಲ್, ಪೆಟ್ರೋಲ್- CNG ಮತ್ತು ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಲಭ್ಯವಿದೆ.
ಪೆಟ್ರೋಲ್ ಚಾಲಿತ ಟಾಟಾ ಪಂಚ್ ನಗರ ಮತ್ತು ಹೆದ್ದಾರಿಗಳಿಗೆ ಸೂಕ್ತವಾದ ಪವರ್ಫುಲ್ ಪರ್ಫಾಮೆನ್ಸ್ ನೀಡುವ ಕಾರಾಗಿದೆ. ಇದು 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಹಣಕ್ಕೆ ತಕ್ಕ ಮೌಲ್ಯಯುತ ಕಾರಾಗಿದೆ.
Hyundai Xter:
ಹ್ಯುಂಡೈ ಎಕ್ಸ್ಟರ್ ಎಸ್ಯುವಿ ಭಾರತದಲ್ಲಿ ಅತೀ ಹೆಚ್ಚು ಫೀಚರ್ಗಳೊಂದಿಗೆ ಬಿಡುಗಡೆಯಾದ ಮೈಕ್ರೋ ಎಸ್ಯುವಿಯಾಗಿದೆ.
10 ಲಕ್ಷ ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿದ್ದು, ಇದು ದೇಶದ ಹಣಕ್ಕೆ ಮೌಲ್ಯಯುತ ಕಾರುಗಳಲ್ಲಿ ಒಂದಾಗಿದೆ. ಈ SUV ಸಾಕಷ್ಟು ವೈಶಿಷ್ಟ್ಯಗಳು ಮತ್ತು ಬಹು ಪವರ್ ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.