Bengaluru: ಇಂದಿನಿಂದ ಹಾಲು, ಮೊಸರು, ವಿದ್ಯುತ್ ದರ, ಟೋಲ್ ಶುಲ್ಕ, ಕಸ ಸಂಗ್ರಹ ಮೇಲಿನ ಸೆಸ್ ಸೇರಿದಂತೆ ಜನ ಸಾಮಾನ್ಯರು ಬಳಸುವ ವಸ್ತುಗಳು ಮತ್ತು ಸೇವೆಗಳ ದರ (Price Hike) ಹೆಚ್ಚಳವಾಗಲಿದೆ. ಈ ಏರಿಕೆ ಬೇಸಿಗೆಯ ತಾಪಮಾನ ಹೆಚ್ಚಾದಂತೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಹಾಲು ಮತ್ತು ಮೊಸರು ದರ ಏರಿಕೆ: ಇಂದಿನಿಂದ ಹಾಲು ಮತ್ತು ಮೊಸರು ದರ ಲೀಟರ್‌ಗೆ ₹4 ಹೆಚ್ಚಳವಾಗಿದೆ. ಕರ್ನಾಟಕ ಹಾಲು ಮಹಾಮಂಡಳ (KMF) ಮನವಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದ್ದು, ಇದರ ಪರಿಣಾಮ ಗ್ರಾಹಕರ ಜೇಬಿಗೆ ಭಾರವಾಗಲಿದೆ.
ವಿದ್ಯುತ್ ದರ ಹೆಚ್ಚಳ: ಈ ದಿನದಿಂದಲೇ ವಿದ್ಯುತ್ ದರವೂ ಏರಿಕೆಯಾಗಲಿದೆ. ಏಪ್ರಿಲ್ ತಿಂಗಳ ಬಿಲ್ ಪಾವತಿಸುವಾಗ ಗ್ರಾಹಕರಿಗೆ ಶಾಕ್ ಎದುರಾಗುವ ಸಾಧ್ಯತೆ ಇದೆ. ಗೃಹ ಜ್ಯೋತಿ ಯೋಜನೆ ಹೊರತುಪಡಿಸಿದ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ₹0.36 ಹೆಚ್ಚಳವಾಗಲಿದೆ. KPTCL ಮತ್ತು ಎಸ್ಕಾಮ್‌ಗಳ ಮನವಿಗೆ ಅನುಗುಣವಾಗಿ ಕೆಇಆರ್ಸಿ ಇದಕ್ಕೆ ಅನುಮೋದನೆ ನೀಡಿದೆ.
ಟೋಲ್ ದರ ದುಬಾರಿ: ಟೋಲ್ ದರ ಶೇ. 3-5ರಷ್ಟು ಹೆಚ್ಚಳವಾಗಲಿದೆ. ರಾಜ್ಯದಲ್ಲಿ 60ಕ್ಕೂ ಹೆಚ್ಚು ಟೋಲ್ ಗೇಟ್‌ಗಳಿದ್ದು, ಈ ಹೆಚ್ಚಳ ವಾಹನ ಸವಾರರ ಮೇಲೇ ಭಾರವಾಗಲಿದೆ.
ಕಸ ಸಂಗ್ರಹ ಸೆಸ್: ಬೆಂಗಳೂರು ಮಹಾನಗರ ಪಾಲಿಕೆ (BBMP) ಕಸ ಸಂಗ್ರಹಕ್ಕೆ ಪ್ರತ್ಯೇಕ ಸೆಸ್ ವಿಧಿಸಿದೆ. ಮನೆ ಮತ್ತು ವಾಣಿಜ್ಯ ಕಟ್ಟಡಗಳಿಗೆ ಈ ಸೆಸ್ ಪ್ರಭಾವ ಬೀರುವ ಸಾಧ್ಯತೆ ಇದೆ.
- 600 ಚದರ ಅಡಿ ವರೆಗೆ – ₹10/ತಿಂಗಳು
- 600-1000 ಚದರ ಅಡಿ – ₹50/ತಿಂಗಳು
- 1000-2000 ಚದರ ಅಡಿ – ₹100/ತಿಂಗಳು
- 2000-3000 ಚದರ ಅಡಿ – ₹150/ತಿಂಗಳು
- 3000-4000 ಚದರ ಅಡಿ – ₹200/ತಿಂಗಳು
- 4000 ಚದರ ಅಡಿ ಮೇಲ್ಪಟ್ಟು – ₹400/ತಿಂಗಳು
ಈ ತೆರಿಗೆ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡುವ ಸಾಧ್ಯತೆಗಳಿವೆ.
ಕುಡಿಯುವ ನೀರು ಮತ್ತು ಆಟೋ ದರ ಏರಿಕೆ ಸಾಧ್ಯತೆ: ಬೆಂಗಳೂರು ಜಲಮಂಡಳಿ ಯಾವುದೇ ಕ್ಷಣದಲ್ಲಿ ಕುಡಿಯುವ ನೀರಿನ ದರ ಹೆಚ್ಚಳ ಮಾಡಬಹುದು. ಒಂದು ಲೀಟರ್ ನೀರಿಗೆ 1 ಪೈಸೆಯಷ್ಟು ಹೆಚ್ಚಳದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಸಹಜವಾಗಿ ಆಟೋ ದರ ಹೆಚ್ಚಳ ಕುರಿತು ಮಾತುಕತೆಗಳು ನಡೆಯುತ್ತಿದ್ದು, ಕನಿಷ್ಠ ದರ ₹30 ರಿಂದ ₹40 ಆಗಬಹುದು. ಒಂದು ಕಿಲೋಮೀಟರ್‌ಗೆ ₹5 ಹೆಚ್ಚಳ ಮಾಡುವಂತೆ ಆಟೋ ಚಾಲಕರ ಸಂಘಗಳು ಒತ್ತಡ ಹಾಕಿವೆ.
ಹೆಚ್ಚುವರಿ ದರ ಏರಿಕೆಗಳೊಂದಿಗೆ, ನಾಗರಿಕರ ಜೀವರಿತದ ಮೇಲೆ ದೊಡ್ಡ ಪ್ರಭಾವ ಬೀರುವ ಸಾಧ್ಯತೆ ಇದೆ.