Saturday, April 20, 2024
HomeSportsKabaddiPro Kabaddi League - Day 4 ನಾಲ್ಕನೇ ದಿನದ ಆಟಗಳು

Pro Kabaddi League – Day 4 ನಾಲ್ಕನೇ ದಿನದ ಆಟಗಳು

ಪ್ರೊ ಕಬಡ್ಡಿ 2021 – ಆವೃತ್ತಿ 8 ರ ( Pro Kabaddi League) ನಾಲ್ಕನೇ ದಿನ ಮೂರು ರೋಮಾಂಚಕ ಆಟಗಳಲ್ಲಿ, ಯುಪಿ ಯೋಧಾ (U.P. Yoddha) ರಾತ್ರಿಯ ಮೊದಲ ಪಂದ್ಯದಲ್ಲಿ ಮೂರು ಬಾರಿ ವಿಜೇತ ಪಾಟ್ನಾ ಪೈರೇಟ್ಸ್ (Patna Pirates) ವಿರುದ್ಧ ಮುಖಾಮುಖಿಯಾಯಿತು. ನಂತರ ತೆಲುಗು ಟೈಟಾನ್ಸ್ (Telugu Titans) ತಂಡವು ಪುಣೇರಿ ಪಲ್ಟನ್ (Puneri Paltan) ವಿರುದ್ಧ ಸೆಣಸಿದರೆ, ಕಡೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ಮತ್ತು ಹರಿಯಾಣ ಸ್ಟೀಲರ್ಸ್ (Haryana Steelers) ನಡುವೆ ಘರ್ಷಣೆ ನಡೆಯಿತು.

ಪಂದ್ಯ 1: UP Yoddha Vs Patna Pirates

UP Yoddha Vs Patna Pirates Pro Kabaddi League 2021

ನಾಲ್ಕನೇ ದಿನದ ಆರಂಭಿಕ ಮುಖಾಮುಖಿಯಲ್ಲಿ ಪಾಟ್ನಾ ಪೈರೇಟ್ಸ್ (Patna Pirates), ಯುಪಿ ಯೋದ್ಧವನ್ನು (U.P. Yoddha) ಎದುರಿಸಿತು. ಕಡೆಯಕ್ಷಣದ ಮಾಡು ಇಲ್ಲವೇ ಮಾಡಿ ಬಜರ್ ರೈಡ್‌ನಲ್ಲಿ (Buzzer Raid) ಅಂಕ ಗಳಿಸುವುದರೊಂದಿಗೆ ಪಂದ್ಯವನ್ನು ಯುಪಿ ಯೋದ್ಧ 36-35 ಅಂಕಗಳಿಂದ ಜಯಗಳಿಸಿತು .

ಯುಪಿ ಯೋದ್ಧ ಪರ ಪರ್ದೀಪ್ ನಾರ್ವಾಲ್ (Pardeep Narwal) ಸೂಪರ್ 10 ಗಳಿಸಿದರೆ, ನಾಯಕ ನಿತೇಶ್ ಕುಮಾರ್ (Nitesh Kumar) ಅವರು ಹೈ 5 ಗಳಿಸಿದರು.

- Advertisement -

ಪಂದ್ಯ 2: Puneri Paltan vs Telugu Titans

Puneri Paltan vs Telugu Titans Pro Kabaddi League 2021

ಎರಡನೇ ಪಂದ್ಯವೂ ಕಡೆಯ ಕ್ಷಣದ ಬಜರ್ ರೇಡ್‌ ನಲ್ಲಿ ನಿರ್ಧಾರವಾಯಿತು. ಪುಣೇರಿ ಪಲ್ಟನ್ (Puneri Paltan) 34-33 ಅಂಕಗಳೊಂದಿಗೆ ತೆಲುಗು ಟೈಟನ್ಸ್ (Telugu Titans) ಪರ ಜಯ ಸಾಧಿಸಿತು.

ಬದಲಿ ರೈಡರ್ ಮೋಹಿತ್ ಗೋಯತ್ (Mohit Goyat) ಒಂಬತ್ತು ಅಂಕಗಳನ್ನು ಗಾಳಿಸುವುದರೊಂದಿಗೆ ಪುಣೇರಿ ಪಲ್ಟನ್ ತಂಡದ ಗೆಲುವಿಗೆ ಕಾರಣರಾದರು. ತೆಲುಗು ಟೈಟನ್ಸ್ ಪರ ಸಿದ್ಧಾರ್ಥ್ ದೇಸಾಯಿ (Siddharth Desai) ಸಾಧಿಸಿದ ಸೂಪರ್ 10 ವ್ಯರ್ಥವಾಯಿತು.

ಪಂದ್ಯ 3: Jaipur Pink Panthers vs Haryana Steelers

Jaipur Pink Panthers vs Haryana Steelers Pro Kabaddi League 2021

ಮೂರನೆಯ ಹಾಗೂ ಕಡೆಯ ಕಡೆಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) 40-38 ರಿಂದ ಹರಿಯಾಣ ಸ್ಟೀಲರ್ಸ್ (Haryana Steelers) ಅನ್ನು ಸೋಲಿಸಿತು. ಅರ್ಜುನ್ ದೇಶ್ವಾಲ್ (Arjun Deshwal) ಮತ್ತು ದೀಪಕ್ ಹೂಡಾ (Deepak Hooda) ಪಿಂಕ್ ಪ್ಯಾಂಥರ್ಸ್‌ಗಾಗಿ ತಲಾ ಒಂದು ಸೂಪರ್ 10 (Super 10) ಅನ್ನು ದಾಖಲಿಸಿದರು.

PKL 2021 Day – 4 Score Card

PKL 2021 ರ ನಾಲ್ಕನೇ ದಿನದ ಪಂದ್ಯಗಳ ನಂತರ, ದಬಾಂಗ್ ಡೆಲ್ಲಿ ಕೆ.ಸಿ. (Dabang Delhi K.C.) ಮತ್ತು ಬೆಂಗಾಲ್ ವಾರಿಯರ್ಸ್ (Bengal Warriors) ಪ್ರೊ ಕಬಡ್ಡಿ 2021 ರಲ್ಲಿ ತಮ್ಮ ಅಗ್ರಸ್ಥಾನವನ್ನು ಮುಂದುವರಿಸಿವೆ.

Pro Kabaddi League Season 8 PKL 2021 Day 4 Points Table Score card


Image Courtesy: Pro Kabaddi

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page