Pro Kabaddi 2021 – ಆವೃತ್ತಿ 8 ರ ಜನವರಿ 6 ರಂದು ಕಬಡ್ಡಿ ಪ್ರೇಕ್ಷಕರು ಮತ್ತೊಂದು ರೋಚಕ ಟೈ ಪಂದ್ಯಕ್ಕೆ ಸಾಕ್ಷಿಯಾದರು. ದಿನದ ಮೊದಲ ಪಂದ್ಯ ತಮಿಳು ತಲೈವಾಸ್ (Tamil Thalaivas) ಮತ್ತು ಪಾಟ್ನಾ ಪೈರೇಟ್ಸ್ (Patna Pirates) ನಡುವೆ ಟೈ ನೊಂದಿಗೆ ಕೊನೆಗೊಂಡಿತು. ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls), ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ವಿರುದ್ಧ ಕಣಕ್ಕೆ ಇಳಿಯಿತು.
ಪಂದ್ಯ 1: Patna Pirates Vs Tamil Thalaivas

ದಿನದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ತಮಿಳ್ ತಲೈವಾಸ್ (Tamil Thalaivas) ಮಧ್ಯೆ 30-30 ಅಂಕಗಳಲ್ಲಿ ಟೈ ಆಯಿತು.
ಪೈರೇಟ್ಸ್ ಪರ ಮೋನು ಗೋಯತ್ (Monu Goyat) 9 ರೇಡ್ ಪಾಯಿಂಟ್, 5 ಟಚ್ ಪಾಯಿಂಟ್, ಟ್ಯಾಕಲ್ ಪಾಯಿಂಟ್, 3 ಬೋನಸ್ ಪಾಯಿಂಟ್‌ಗಳನ್ನು ಗಳಿಸಿದರು. ಪ್ರಶಾಂತ್ ಕುಮಾರ್ ರೈ (Prashanth Kumar Rai) 7 ಪಾಯಿಂಟ್‌ಗಳನ್ನು ಪಡೆದರು.
ತಮಿಳ್ ತಲೈವಾಸ್ ಪರ ಅಜಿಂಕ್ಯ ಪವಾರ್ (Ajinkya Pawar) 12 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು.
ಪಂದ್ಯ 2: Bengaluru Bulls Vs Jaipur Pink Panthers

ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ವಿರುದ್ಧ ಬೆಂಗಳೂರು ಬುಲ್ಸ್ (Bengaluru Bulls) 38-31 ಅಂಗಳೊಂದಿಗೆ ಪ್ರಾಬಲ್ಯ ಸಾಧಿಸಿತು.
ಬೆಂಗಳೂರು ಬುಲ್ಸ್ ಪರ ನಾಯಕ ಪವನ್ ಸೆಹ್ರಾವತ್ (Pawan Sehrawat) 18 ಅಂಕಗಳನ್ನು ಗಳಿಸಿದರು. ಡಿಫೆಂಡರ್ ಸೌರಭ್ ನಂದಲ್ (Saurabh Nandal) 3 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು.
ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ (Arjun Deshwal) ಸೂಪರ್ 10 ಗಳಿಸಿದರು.
PKL 2021 – January 6, 2022 Score Card
PKL 2021 ರ January 6, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ
