Bengaluru (Bangalore) : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth RajKumar) ನಮ್ಮನ್ನು ಆಗಲಿ 7 ತಿಂಗಳು ಕಳೆದರೂ ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಬೈಕ್, ಕಾರ್, ರಸ್ತೆ, ಜಾತ್ರೆ ಹೀಗೆ ಎಲ್ಲಾ ಕಡೆ ಅಪ್ಪುವಿನ ಭಾವಚಿತ್ರಗಳು ಕಂಡು ಬರುತ್ತದೆ. ಈಗ ಸಚಿವರೊಬ್ಬರು ತಮ್ಮ ಕಚೇರಿಯಲ್ಲಿ ಅರಸು (Arasu) ಚಿತ್ರದಲ್ಲಿ ಅಪ್ಪು (Appu) ಬಳಸಿರುವ ಜಾಕೆಟನ್ನು ಫ್ರೇಮ್ ಹಾಕಿಸಿ ಇಟ್ಟಿರುವುದು ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗಿದೆ.
ವಿಜಯ ನಗರದ (Vijayanagara) ಹೊಸಪೇಟೆ (Hospet) ಗೂ ಕರ್ನಾಟಕ ರತ್ನ (Karnataka Ratna) ಪುನೀತ್ ರಾಜ್ ಕುಮಾರ್ ರಿಗೂ ಆವಿರ್ಭಾವ ಸಂಭಂದ. ಅಪ್ಪು ರವರ ಮೇಲೆ ಅಪಾರ ಪ್ರೀತಿ ಹೊಂದಿದ್ದ ಹೊಸಪೇಟೆ ಜನತೆ ಪುನೀತ್ ರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಮೂಲಕ ಅವರ ಅಭಿಮಾನವನ್ನು ಸಾರಿದರು. ಅಪ್ಪಟ ಪುನೀತ್ ಅಭಿಮಾನಿಯಾದ ಹೊಸಪೇಟೆಯ ಕಿಚಡಿ ವಿಶ್ವ ಎಂಬುವವರಿಗೆ ಪುನೀತ್ ಅರಸು ಸಿನಿಮಾದಲ್ಲಿ ಧರಿಸಿದ ಜಾಕೆಟ್ ಅನ್ನು ಉಡುಗಡೆಯಾಗಿ ನೀಡಿದರು. ಆ ಜಾಕೆಟ್ ಅನ್ನು ವಿಶ್ವ ಅವರು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ (Anand Singh) ಅವರ ಪುತ್ರ ಸಿದ್ದಾರ್ಥ್ ಸಿಂಗ್ಗೆ ನೀಡಿದ್ದು, ಅವರು ಜಾಕೆಟ್ ಅನ್ನು ತಮ್ಮ ತಂದೆಯ ಕಚೇರಿಯಲ್ಲಿ ಫ್ರೇಮ್ ಹಾಕಿಸಿ ಇಟ್ಟಿದ್ದಾರೆ.
ಆನಂದ್ ಸಿಂಗ್ ಹಾಗು ಅವರ ಪುತ್ರನ ಈ ವೈಖರಿಗೆ ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.