ಮಲಬದ್ಧತೆ (constipation) ಇಂದು ಬಹುತೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ವಾತಾವರಣ, ಆಹಾರ ಪದ್ಧತಿ, ಒತ್ತಡದ ಜೀವನ, ಜಂಕ್ ಫುಡ್ ಸೇವನೆ, ಇವುಗಳಿಂದ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಔಷಧಿ ತೆಗೆದುಕೊಳ್ಳುವ ಬದಲು ಅಡುಗೆ ಮನೆಯಲ್ಲಿ ಸಿಗುವ ಎರಡು ಸರಳ ಮನೆಮದ್ದುಗಳಿಂದಲೇ ಪರಿಹಾರ ಪಡೆಯಬಹುದು, ಜೀರಿಗೆ ನೀರು ಮತ್ತು ಸೋಂಪು ನೀರು.
ಜೀರಿಗೆ ನೀರಿನ ಪ್ರಯೋಜನಗಳು
- ಹೊಟ್ಟೆ ಉಬ್ಬರ ಮತ್ತು ಅನಿಲ ನಿವಾರಣೆ – ಜೀರಿಗೆ ಹೊಟ್ಟೆಯ ಅನಿಲವನ್ನು ಕಡಿಮೆ ಮಾಡುತ್ತದೆ.
- ಆಮ್ಲೀಯತೆ ಕಡಿಮೆ ಮಾಡುವುದು – ನೈಸರ್ಗಿಕ ಆಮ್ಲ ವಿರೋಧಿಯಾಗಿ ಕೆಲಸ ಮಾಡುತ್ತದೆ.
- ಮಲಬದ್ಧತೆ ನಿವಾರಣೆ – ಫೈಬರ್ ಇರುವುದರಿಂದ ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ.
- ಚಯಾಪಚಯ ಹೆಚ್ಚಿಸುವುದು – ಆಹಾರ ತ್ವರಿತವಾಗಿ ಜೀರ್ಣವಾಗಲು ಸಹಾಯ.
ತಯಾರಿಸುವ ವಿಧಾನ: 1 ಟೀ ಚಮಚ ಜೀರಿಗೆ 1 ಲೋಟ ನೀರಿನಲ್ಲಿ ಕುದಿಸಿ, ಅರ್ಧಕ್ಕೆ ಇಳಿದಾಗ ಸೋಸಿ ಬೆಚ್ಚಗೆ ಕುಡಿಯಿರಿ. ಅಥವಾ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.
ಸೋಂಪು ನೀರಿನ ಪ್ರಯೋಜನಗಳು
- ಆಮ್ಲೀಯತೆ ಮತ್ತು ಎದೆಯುರಿ ಕಡಿಮೆ – ಹೊಟ್ಟೆಯ ಶಾಖ ಶಮನ.
- ಅಜೀರ್ಣ ನಿವಾರಣೆ – ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ.
- ಹೊಟ್ಟೆಯ ಸೆಳೆತ ಕಡಿಮೆ – ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.
- ಮಲಬದ್ಧತೆಗೆ ಸಹಾಯ – ಫೈಬರ್ ಇರುವುದರಿಂದ ಹೊಟ್ಟೆ ಸ್ವಚ್ಛ.
ತಯಾರಿಸುವ ವಿಧಾನ: 1 ಟೀ ಚಮಚ ಸೋಂಪು 1 ಲೋಟ ನೀರಿನಲ್ಲಿ 5-10 ನಿಮಿಷ ಕುದಿಸಿ, ಸೋಸಿ ಬೆಚ್ಚಗೆ ಕುಡಿಯಿರಿ. ಅಥವಾ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಕುಡಿಯಿರಿ.
ಯಾವಾಗ ಯಾವ ನೀರು?
- ಗ್ಯಾಸ್, ಹೊಟ್ಟೆ ಉಬ್ಬರ – ಜೀರಿಗೆ ನೀರು ಉತ್ತಮ.
- ಆಮ್ಲೀಯತೆ, ಹೊಟ್ಟೆಯ ಶಾಖ – ಸೋಂಪು ನೀರು ಉತ್ತಮ.
- ಮೂರೂ ಸಮಸ್ಯೆಗಳು ಇದ್ದರೆ – ಜೀರಿಗೆ, ಸೋಂಪು, ಮತ್ತೊಂದು ಸಮಾನ ಪ್ರಮಾಣದ ಮಿಶ್ರಣ ಮಾಡಿ ಪುಡಿ ಮಾಡಿ, ಉಗುರುಬೆಚ್ಚಗಿನ ನೀರಿನೊಂದಿಗೆ ಊಟದ ನಂತರ ಸೇವಿಸಬಹುದು.