
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಮೆರಿಕಾ (Rahul Gandhi on US tour) ಪ್ರವಾಸದಲ್ಲಿದ್ದಾರೆ. ಶನಿವಾರ ಅವರು ನ್ಯೂಯಾರ್ಕ್‌ನಿಂದ ಅಮೆರಿಕ ತಲುಪಿದ್ದು, ಅನಿವಾಸಿ ಭಾರತೀಯರು ಹಾಗೂ ಉದ್ಯಮಿಗಳ ಜೊತೆ ವಿವಿಧ ವಿಷಯಗಳ ಕುರಿತು ಸಂವಾದ ನಡೆಸುತ್ತಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಅವರು ಬ್ರೌನ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಉಪನ್ಯಾಸ ನೀಡಲಿದ್ದಾರೆ. ಅಲ್ಲಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕೂಡ ನಡೆಯಲಿದೆ.
ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು “ಯುವಜನತೆ, ಪ್ರಜಾಪ್ರಭುತ್ವ ಮತ್ತು ಉತ್ತಮ ಭವಿಷ್ಯಕ್ಕಾಗಿ ಒಟ್ಟಿಗೆ ಧ್ವನಿ ಎತ್ತೋಣ” ಎಂಬ ಸಂದೇಶವನ್ನು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ನೀಡಿದ್ದಾರೆ.
ಅಲ್ಲದೇ, “ರಾಹುಲ್ ಗಾಂಧಿಯವರು ಅಮೆರಿಕದ ಕೆಲ ಪ್ರಮುಖ ಉದ್ಯಮಿಗಳ ಜೊತೆ ಉಪಯುಕ್ತ ಸಂಭಾಷಣೆ ನಡೆಸಿದರು. ಉದ್ಯಮಶೀಲತೆ, ತಂತ್ರಜ್ಞಾನ, ಒಳಗೊಳ್ಳುವಿಕೆ ಹಾಗೂ ನೈತಿಕ ನಾಯಕತ್ವದ ಮಹತ್ವದ ಬಗ್ಗೆ ಚರ್ಚೆ ನಡೆಯಿತು” ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ಪ್ರವಾಸದ ಅಂಗವಾಗಿ ರಾಹುಲ್ ಗಾಂಧಿಯವರು NRI ಸಮುದಾಯದ ಸದಸ್ಯರು, ಸಾಗರೋತ್ತರ ಕಾಂಗ್ರೆಸ್‌ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಕೂಡ ಭೇಟಿಯಾಗುತ್ತಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದರೆ, ಈ ಬಾರಿ ಅವರು ಲೋಕಸಭೆಯ ಪ್ರತಿಪಕ್ಷ ನಾಯಕನಾಗಿ ಮೊದಲ ಬಾರಿಗೆ ವಿದೇಶ ಪ್ರವಾಸದಲ್ಲಿದ್ದಾರೆ.