
New Delhi: ‘ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೇಗೆ ನೋಡುವಿರಾ?’ ಎಂದು ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿಗೆ (Rahul Gandhi) ಸುಪ್ರೀಂ ಕೋರ್ಟ್ (Supreme Court) ಕಠಿಣ ಪ್ರಶ್ನೆ ಮಾಡಿದಿದೆ. ವೀರ ಸಾವರ್ಕರ್ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ, ಆದರೆ ನೀವು ಏನು ಮಾಡುತ್ತಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸದಿದ್ದಕ್ಕೆ, ರಾಹುಲ್ ಗಾಂಧಿಗೆ ಮುಖಭಂಗವಾಗಿದೆ.
ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಹೇಳಿಕೆಗಳನ್ನು ನಾವು ಅನುಮತಿಸುವುದಿಲ್ಲ. ಈ ಬಾರಿ ಸಾವರ್ಕರ್ ಕುರಿತು ಹೇಳಿದ ಮೇಲೆ, ಮುಂದಿನ ಬಾರಿ ಮಹಾತ್ಮಾ ಗಾಂಧಿ ಬ್ರಿಟಿಷರ ಸೇವಕರಾಗಿದ್ದರು ಎಂದು ಹೇಳಿದರೆ ಅದನ್ನೂ ನಾವು ತೀರಾ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
ಲಕ್ನೋ ನ್ಯಾಯಾಲಯದಲ್ಲಿ ಸ್ತಬ್ಧವಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದರೂ, ಭವಿಷ್ಯದಲ್ಲಿ ರಾಹುಲ್ ಗಾಂಧಿ ಮತ್ತಷ್ಟು ಅವಮಾನಕಾರಿ ಹೇಳಿಕೆಗಳನ್ನು ನೀಡಿದರೆ, ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ಹೂಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ನ್ಯಾಯಮೂರ್ತಿಗಳು, ವಿಶೇಷವಾಗಿ ದೀಪಂಕರ್ ದತ್ತ, ರಾಹುಲ್ ಗಾಂಧಿಯ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಅವರು ವೈಸರಾಯಿಗೆ ಮಹಾತ್ಮಾ ಗಾಂಧಿ ಬರೆದ ಪತ್ರದಲ್ಲಿ ‘Your Faithful Servant’ ಎಂಬ ಪದ ಬಳಸಿದ ಹಿನ್ನೆಲೆಯಲ್ಲಿ, ಮಹಾತ್ಮಾ ಗಾಂಧಿಯನ್ನು ಬ್ರಿಟಿಷರ ಸೇವಕ ಎಂದು ಕರೆಯಬಹುದೆಂಬುದಾಗಿ ಪ್ರಶ್ನೆ ಮಾಡಿದರು.
ರಾಹುಲ್ ಗಾಂಧಿಯು ಸಾಮೂಹಿಕ ದ್ವೇಷವನ್ನು ಹರಡುವ ಉದ್ದೇಶದಿಂದ ಮಾತ್ರ ಸಾವರ್ಕರ್ ಅವರನ್ನು ಬ್ರಿಟಿಷರ ಸೇವಕ ಎಂದು ಕರೆಯುವುದಾಗಿ ವಕೀಲ ನೃಪೇಂದ್ರ ಪಾಂಡೆ ದೂರು ನೀಡಿದ್ದರು.