Rae Bareli (Uttar Pradesh): ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi) ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು, ದಿಬ್ರುಗಢ – ನವದೆಹಲಿ ನಡುವೆ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ರಾಯ್ ಬರೇಲಿ ಜಂಕ್ಷನ್ನಲ್ಲಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಈ ರೈಲು ರಾಯ್ ಬರೇಲಿ ಮೂಲಕ ಹಾದು ಹೋಗುತ್ತಿದ್ದರೂ ನಿಲುಗಡೆ ಇಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ನಿಲುಗಡೆ ಬಹಳ ದಿನಗಳಿಂದ ಬೇಡಿಕೆ ಆಗಿದ್ದು, ಕೆಲಸ, ಶಿಕ್ಷಣ ಮತ್ತು ವೈದ್ಯಕೀಯ ಕಾರಣಗಳಿಂದ ನವದೆಹಲಿಗೆ ತೆರಳುವವರಿಗೆ ಇದು ಸಹಾಯಕವಾಗಲಿದೆ ಎಂದು ಗಾಂಧಿ ತಿಳಿಸಿದ್ದಾರೆ.
ಅವರು ರೈಲು ಸಂಖ್ಯೆಗಳ 20503-20504 ಮತ್ತು 20505-20506 ನಿಲುಗಡೆ ಪರಿಗಣಿಸಬೇಕು ಎಂದು ಸಚಿವರಿಗೆ ಒತ್ತಾಯಿಸಿದ್ದಾರೆ.
ಅಮೇಥಿ ಸಂಸದ ಕಿಶೋರಿ ಲಾಲ್ ಶರ್ಮಾ ಕೂಡ ಈ ವಿಷಯವನ್ನು ದೃಢಪಡಿಸಿ, ರಾಹುಲ್ ಗಾಂಧಿಯವರ ಪತ್ರ ಸ್ಥಳೀಯ ಜನರ ಕಾಳಜಿಗಳನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.







