Friday, April 26, 2024
HomeIndiaNew Delhiಭಾರತದ 15 ನೇ ರಾಷ್ಟ್ರಪತಿಯಾಗಿ Draupadi Murmu ಆಯ್ಕೆ

ಭಾರತದ 15 ನೇ ರಾಷ್ಟ್ರಪತಿಯಾಗಿ Draupadi Murmu ಆಯ್ಕೆ

New Delhi : ಭಾರತದ (India) 15ನೇ ರಾಷ್ಟ್ರಪತಿಯಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಒಡಿಶಾ (Odissa) ಮೂಲದ NDA ಕೂಟದ ರಾಷ್ತ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು (Draupadi Murmu) ಆಯ್ಕೆಯಾಗಿದ್ದಾರೆ. July 21 ರಂದು ನಡೆದ ಮತ ಎಣಿಕೆಯಲ್ಲಿ 64% ಮತಗಳನ್ನು ಪಡೆಯುವ ಮೂಲಕ ಮುರ್ಮು, ಭಾರತದ 15ನೇ ರಾಷ್ಟ್ರಪತಿಯಾಗಿ (President of India) ಆಯ್ಕೆಗೊಂಡಿದ್ದಾರೆ. ಇವರ ಪ್ರತಿಸ್ಪರ್ಧಿ, ವಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಯಶವಂತ್‌ ಸಿನ್ಹಾ (Yashwant Sinha) 36% ಮತಗಳನ್ನು ಪಡೆದರು.

ಜುಲೈ 18 ರಂದು ನಡೆದ ಚುನಾವಣೆಯಲ್ಲಿ 99% ರಷ್ಟು ಮತದಾನವಾಗಿದ್ದು, 771 ಸಂಸದರು (Member of Parliament) ಹಾಗೂ 4025 ಶಾಸಕರು (MLA) ಮತ ಚಲಾಯಿಸಿದ್ದರು. ಚಲಾವಣೆಗೊಂಡ ಮತಗಳ ಪೈಕೀ ದ್ರೌಪದಿ ಮುರ್ಮು ಅವರು 6,76,803 ಮತ (Votes) ಪಡೆದರೆ, ಯಶವಂತ್‌ ಸಿನ್ಹಾ 3,80,177 ಮತಗಳನ್ನು ಪಡೆದಿದ್ದಾರೆ ಎಂದು ರಿಟರ್ನಿಂಗ್‌ ಆಫೀಸರ್‌ ಪಿ.ಸಿ.ಮೋದಿ ಪ್ರಕಟಿಸಿದರು.

ಹಾಲಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ (Ram Nath Kovind) ಅವರ ಅವಧಿ ಜುಲೈ 24ಕ್ಕೆ ಮುಗಿಯಲಿದ್ದು, ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಜುಲೈ 25ರ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನೂತನ ರಾಷ್ಟ್ರಪತಿಗೆ ಹಾಲಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ (Narendra Modi), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J. P. Nadda), ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ (Sonia Gandhi), ರಾಹುಲ್‌ ಗಾಂಧಿ (Rahul Gandhi), ಪರಾಜಿತ ಅಭ್ಯರ್ಥಿ ಯಶವಂತ್‌ ಸಿನ್ಹಾ, ಎಲ್ಲಾ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

For Daily Updates WhatsApp ‘HI’ to 7406303366

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page