back to top
25.6 C
Bengaluru
Saturday, January 18, 2025
HomeKarnatakaRamanagaraRamanagara ಜಿಲ್ಲೆಯಾದ್ಯಂತ ವಿಶ್ವಮಾನವ ಕುವೆಂಪು ಜನ್ಮದಿನಾಚರಣೆ

Ramanagara ಜಿಲ್ಲೆಯಾದ್ಯಂತ ವಿಶ್ವಮಾನವ ಕುವೆಂಪು ಜನ್ಮದಿನಾಚರಣೆ

- Advertisement -
- Advertisement -

Ramanagara District : ಜಿಲ್ಲೆಯಾದ್ಯಂತ ವಿಶ್ವಮಾನವ, ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯನ್ನು (Rashtrakavi Kuvempu Jayanti) ಆಚರಿಸಲಾಯಿತು

ರಾಮನಗರ – Ramanagara

ರಾಮನಗರ ನಗರದ ಶಾಸಕರ ಕಚೇರಿಯಲ್ಲಿ ಬುಧವಾರ ಕುವೆಂಪು ಜಯಂತಿಯನ್ನು JDS ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಆಚರಿಸಲಾಯಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಶೇಖರ್ “ಕುವೆಂಪು ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆ ಅವರಿಂದ ಯುಗದ ಕವಿ ಜಗದ ಕವಿ ಎನಿಸಿಕೊಂಡು ವಿಶ್ವಮಾನವ ಸಂದೇಶ ನೀಡಿದ ಮಹಾಕವಿ ಕುವೆಂಪು. ಅವರ ಮನುಜ ಮತ, ವಿಶ್ವಪಥ, ವಿಶ್ವ ಮಾನವ ಸಂದೇಶ, ಕೊಳಲು, ಪಾಂಚಜನ್ಯ, ಜಲಗಾರ ಮೊದಲಾದ ಕೃತಿಗಳು ಮೇರು ಬರಹಗಳಾಗಿವೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಕುವೆಂಪು ಅವರ ಸಾಹಿತ್ಯವನ್ನು ಪ್ರತಿಯೊಬ್ಬರೂ ಓದಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ವಕ್ತಾರ ಉಮೇಶ್, ಮುಖಂಡರಾದ ಮಾವಿನ ಸಸಿ ವೆಂಕಟೇಶ್, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಪಾದ್ರಳ್ಳಿ ರಾಮಣ್ಣ, ಸಿ.ಎಸ್. ಜಯಕುಮಾರ್, ಶೋಭಾವತಿ, ಸರಸ್ವತಿ, ಜೆಡಿಎಸ್‌ ಜಿಲ್ಲಾ ಪದವೀಧರ ಘಟಕದ ಅಧ್ಯಕ್ಷ ಜಿ.ಟಿ. ಕೃಷ್ಣ, ಕೆಂಗಲಯ್ಯ, ರಮೇಶ್, ಕಿರಣ್, ನರೇಂದ್ರ, ಚೇತನ್, ದೊಡ್ಡಿ ಉಮೇಶ್ ಪಾಲ್ಗೊಂಡಿದ್ದರು.

ಚನ್ನಪಟ್ಟಣ – Channapatna

ಚನ್ನಪಟ್ಟಣ ನಗರದ ಕೋಟೆ ಬಡಾವಣೆಯ ನ್ಯೂ ಮಿಲೇನಿಯಂ ಪಬ್ಲಿಕ್ ಶಾಲೆಯಲ್ಲಿ (New Millennium Public School) ಶುಭೋದಯ ಸಾಂಸ್ಕೃತಿಕ ಸ್ನೇಹ ಬಳಗದಿಂದ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತ್ತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ(Kannada Sahitya Parishat) ಮಾಜಿ ಅಧ್ಯಕ್ಷ ಎಂ. ಶಿವಮಾದು ಮಾತನಾಡಿ, ಕುವೆಂಪು ರವರನ್ನು ಇಂದಿನ ಯುವ ಕವಿಗಳು ಅನುಸರಿಸಬೇಕು. ತಮ್ಮ ಮಹಾಕಾವ್ಯದ ಮೂಲಕ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿಗಳಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮೊಟ್ಟ ಮೊದಲಿಗೆ ಕನ್ನಡಕ್ಕೆ ತಂದು ಕೊಟ್ಟ ಕೀರ್ತಿ ಕುವೆಂಪುಗೆ ಸಲ್ಲುತ್ತದೆ ಎಂದು ಹೇಳಿದರು.

ಸ್ನೇಹ ಸಂಘದ ಮಾಜಿ ಅಧ್ಯಕ್ಷ ರಾಮ ಚಂದ್ರು ಅಧ್ಯಕ್ಷತೆವಹಿಸಿದ್ದರು. ಶಾಲೆಯ ಕಾರ್ಯದರ್ಶಿ ಆರ್.ಸಿ. ಲಕ್ಷ್ಮಮ್ಮ, ನಿವೃತ್ತ ಜಿಲ್ಲಾ ಖಜಾನಾಧಿಕಾರಿ ಸಿ.ಎಸ್. ಶ್ರೀಕಂಠಯ್ಯ, ನಿವೃತ್ತ ಆರೋಗ್ಯಾಧಿಕಾರಿ ಎಸ್. ಮಂಜುನಾಥ್, ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಪ್ರಕಾಶ್ ರೆಡ್ಡಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚನ್ನಪಟ್ಟಣ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಉದ್ಘಾಟಿಸಿದರು.

ಬಿಡದಿ – Bidadi

ಬಿಡದಿಯ ಜ್ಞಾನವಿಕಾಸ್ ಪದವಿ ಕಾಲೇಜಿನಲ್ಲಿ (Gnanavikas Degree College) ಕನ್ನಡ ವಿಭಾಗವು ಆಯೋಜಿಸಿದ್ದ ವಿಶ್ವಮಾನ ದಿನಾಚರಣೆ ಮತ್ತು ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಬಿಐಎಂಎಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ವಿ.ಡಿ. ಮಹದೇವ ಪ್ರಕಾಶ್ ಉದ್ಘಾಟಿಸಿದರು.

ಮಾಗಡಿ – Magadi

ಮಾಗಡಿ ಪಟ್ಟಣದ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಡಾ.ಡಿ.ಸಿ. ರಾಮಚಂದ್ರ, ಸಿ.ಆರ್‌.ಪಿ ಮುನಿಯಪ್ಪ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page