Home Karnataka Ramanagara ರಾಮನಗರದ ಚಿತ್ರಮಂದಿರಕ್ಕೆ ನಾಯಕ ನಟ ನಿಖಿಲ್ ಕುಮಾರಸ್ವಾಮಿ ಭೇಟಿ

ರಾಮನಗರದ ಚಿತ್ರಮಂದಿರಕ್ಕೆ ನಾಯಕ ನಟ ನಿಖಿಲ್ ಕುಮಾರಸ್ವಾಮಿ ಭೇಟಿ

Ramanagara Nikhil Kumaraswamy Rider Movie Theatre Visit

Ramanagara : ರೈಡರ್ (Rider Movie) ಚಿತ್ರದ ವಿಜಯೋತ್ಸವದ ಅಂಗವಾಗಿ ನಾಯಕ ನಟ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಭಾನುವಾರ ರಾಮನಗರದ ಶಾನ್ ಚಿತ್ರಮಂದಿರಕ್ಕೆ ಭೇಟಿ ನೀಡಿದರು. ತಮ್ಮ ನೆಚ್ಚಿನ ನಾಯಕನನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದರು. ನಗರದ ಐಜೂರು ವೃತ್ತದ (Ijoor circle) ಬಳಿಯಿಂದ ಚಿತ್ರಮಂದಿರದವರೆಗೆ ನಿಖಿಲ್‌ ಅವರನ್ನು ಅಭಿಮಾನಿಗಳು ಪಟಾಕಿ ಸಿಡಿಸಿ, ಜಾನಪದ ಕಲಾತಂಡಗೊಂದಿಗೆ ಮೆರವಣಿಗೆಯಲ್ಲಿ ಪುಷ್ಪಾರ್ಚನೆ ಮೂಲಕ ಚಿತ್ರಮಂದಿರಕ್ಕೆ ಕರೆತಂದರು. ಚಿತ್ರಮಂದಿರದ ಹೊರಗೆ ಸೇಬು ಹಣ್ಣಿನ ಬೃಹತ್ ಗಾತ್ರದ ಹಾರವನ್ನು ಕ್ರೇನ್ ಮೂಲಕ ಹಾಕಿ ನಿಖಿಲ್ ಅವರಿಗೆ ಸನ್ಮಾನಿಸಲಾಯಿತು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ “ನಾನು ನಟಿಸಿರುವ ಚಿತ್ರಗಳಲ್ಲಿ ಸಮಾಜಕ್ಕೆ ಬೇಕಾದ ಉತ್ತಮ ಸಂದೇಶಗಳಿರುತ್ತವೆ, ರೈಡರ್ ಚಿತ್ರದಲ್ಲೂ ಉತ್ತಮ ಸಂದೇಶವಿದ್ದು ಚಿತ್ರಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ ಪ್ರಚಾರಕ್ಕೆ ಡಿಸೆಂಬರ್ 31 ರಂದು ಬಂದ್ ಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ. ಇದರಿಂದ ಚಿತ್ರೋದ್ಯಮ ಸೇರಿದಂತೆ ಕನ್ನಡಿಗರಿಗೆ ಅನಾನುಕೂಲವೇ ಹೆಚ್ಚು” ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version