Home Karnataka Bengaluru Rural ಆನೇಕಲ್ ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳ ಚುನಾವಣೆ

ಆನೇಕಲ್ ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳ ಚುನಾವಣೆ

0
Bengaluru Rural Anekal Hebbagodi City Municipal Corporation Chandapura Jigani Town Municipal Corporation Election

Anekal, Bengaluru Rural : ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆ (Hebbagodi City Municipal Corporation) , ಚಂದಾಪುರ (Chandapura) ಮತ್ತು ಜಿಗಣಿ (Jigani) ಪುರಸಭೆಗೆ (Town Municipal Corporation) ಸೋಮವಾರ ಮತದಾನ ನಡೆಯಲಿದ್ದು, ಚುನಾವಣೆ (Election) ಸುಗಮವಾಗಿ ನಡೆಯಲು ತಾಲ್ಲೂಕು ಆಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಸುದ್ಧಿಗಾರರಿಗೆ ತಹಶೀಲ್ದಾರ್‌ ಪಿ. ದಿನೇಶ್‌ ಮಾಹಿತಿ ನೀಡಿದರು.

31 ವಾರ್ಡ್‌ಗಳೊಳಗೊಂಡ ಹೆಬ್ಬಗೋಡಿ ನಗರಸಭೆಯಲ್ಲಿ 5 ವಾರ್ಡ್‌ಗಳಲ್ಲಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 26 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಸ್ಥಾಪಿಸಲಾದ 44 ಮತಗಟ್ಟೆಯಲ್ಲಿ 10 ಸೂಕ್ಷ್ಮ ಮತ್ತು 7 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 59,205 ಮತದಾರರೊಂದಿರುವ ನಗರಸಭೆಯಲ್ಲಿ 58 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಿಕೊಳ್ಳುತ್ತಿದ್ದಾರೆ.

ಚಂದಾಪುರ ಪುರಸಭೆಯಲ್ಲಿ 23 ವಾರ್ಡ್‌ಗಳಿಗೆ ಚುನಾವಣೆ ನಿಗದಿಯಾಗಿದ್ದೆ. 27 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 5 ಸೂಕ್ಷ್ಮ ಮತ್ತು 1 ಅತಿಸೂಕ್ಷ್ಮ ಮತಗಟ್ಟೆಯಾಗಿದೆ. 27,062ಮತದಾರರೋಂದಿರುವ ಪುರಸಭೆಯಲ್ಲಿ 56 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಿಗಣಿ ಪುರಸಭೆಯಲ್ಲಿ 23 ವಾರ್ಡ್‌ಗಳಿಗೆ ಚುನಾವಣೆ ನಿಗದಿಯಾಗಿದ್ದು, 61 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 18 ಸೂಕ್ಷ್ಮ ಮತ್ತು 5 ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ. ಒಟ್ಟು 16,496 ಮತದಾರರು ಇದ್ದಾರೆ.

ಆನೇಕಲ್‌ ಉಪ ವಿಭಾಗದ ಡಿವೈಎಸ್‌ಪಿ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಒಂದು ನಗರಸಭೆ ಮತ್ತು ಎರಡು ಪುರಸಭೆಗಳ ಚುನಾವಣೆಗಾಗಿ 470 ಮತಗಟ್ಟೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 94 ಮಂದಿ ಪೊಲೀಸ್‌ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಮತಗಟ್ಟೆಗಳಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಪ್ರತಿ ಮತಗಟ್ಟೆಗೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಸ್ಯಾನಿಟೈಜ್‌ ಮತ್ತು ಥರ್ಮಲ್‌ ಸ್ಕ್ಯಾನಿಂಗ್‌ ಮಾಡಲಾಗುವುದು. ಅವಶ್ಯಕತೆ ಇದ್ದರೆ Covid-19 ಪರೀಕ್ಷೆಗೂ ವ್ಯವಸ್ಥೆ ಮಾಡಲಾಗಿದೆ. ಅಂತರ ಕಾಯ್ದುಕೊಂಡು ಚುನಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version