Home Karnataka Ramanagara ರೇಷ್ಮೆಗೂಡಿನ ಮಾರುಕಟ್ಟೆ ಆವರಣದಲ್ಲಿ ರೈತನ ಮೇಲೆ ಹಲ್ಲೆ ಯತ್ನ

ರೇಷ್ಮೆಗೂಡಿನ ಮಾರುಕಟ್ಟೆ ಆವರಣದಲ್ಲಿ ರೈತನ ಮೇಲೆ ಹಲ್ಲೆ ಯತ್ನ

589
Ramanagara Silk Cocoon Market

Ramanagara : ಸೋಮವಾರ ಜಿಲ್ಲಾ Police ವರಿಷ್ಟಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಮನಗರ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ (Silk Cocoon Market) ಆವರಣದಲ್ಲಿ ರೈತನ ಮೇಲೆ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿ ಸಭೆ ನಡೆಯಿತು.

ಮಾರುಕಟ್ಟೆ ಆವರಣದಲ್ಲಿ ರೈತನ ಮೇಲೆ ಹಲ್ಲೆ ನಡೆಸಿದ ರೀಲರ್ (Reeler) ಅನ್ನು ಬಂಧಿಸಬೇಕು. ಮಾರುಕಟ್ಟೆಯಲ್ಲಿ ಪೊಲೀಸ್ ಉಪಠಾಣೆ ತೆರೆದು ಹರಾಜು ವೇಳೆಯಲ್ಲಿ ಪೊಲೀಸರನ್ನು ನೇಮಿಸಬೇಕು. ಗೂಡು ಕಳ್ಳತನದಂತಹ ಪ್ರಕರಣಗಳು ಮರುಕಳಿಸುತ್ತಲೇ ಇದ್ದು, ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ರೈತ ಮುಖಂಡರು ಒತ್ತಾಯಿಸಿದರು.

ಗೂಡು ಮಾರುಕಟ್ಟೆಗೆ ಹೊರ ರಾಜ್ಯದಿಂದಲೂ ರೈತರು ಗೂಡು ತರುತ್ತಾರೆ. ಇವರಿಗೆ ಸೂಕ್ತ ಭದ್ರತೆ ಒದಗಿಸಿಕೊಡಬೇಕು. ಮಾರುಕಟ್ಟೆಯಲ್ಲಿ ಸಿಸಿಟಿವಿಗಳು ಸಕ್ರಿಯವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು

DySP ಮೋಹನ್‌, ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯ ಅಧಿಕಾರಿಗಳು, ರೇಷ್ಮೆ ಬೆಳೆಗಾರರು ಸಭೆಯಲ್ಲಿ ಪಾಲ್ಗೊಂಡರು.

NO COMMENTS

LEAVE A REPLY

Please enter your comment!
Please enter your name here

You cannot copy content of this page