Bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹೊಸ ದಾಖಲೆ ನಿರ್ಮಿಸಿದ್ದು, Instagram ನಲ್ಲಿ 18 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರುವ ಐಪಿಎಲ್‌ನ ಅತಿ ಜನಪ್ರಿಯ ಫ್ರಾಂಚೈಸಿಯಾಗಿದೆ.
2023ರ ನವೆಂಬರ್ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್ (17.7 ಮಿಲಿಯನ್) ಮತ್ತು ಮುಂಬೈ ಇಂಡಿಯನ್ಸ್ (16.2 ಮಿಲಿಯನ್) ಹಿಂದಿನ ಸ್ಥಾನದಲ್ಲಿದ್ದ RCB, ತನ್ನ ಕ್ರಿಯಾತ್ಮಕ ಕಂಟೆಂಟ್ ಮತ್ತು ಅಭಿಮಾನಿಗಳ ಪ್ರೀತಿಯಿಂದಾಗಿ ಇತ್ತೀಚೆಗೆ ಅಗ್ರಸ್ಥಾನಕ್ಕೇರಿದೆ. 2025ರ ಮಾರ್ಚ್ 23ರಂದು 17 ಮಿಲಿಯನ್ ಫಾಲೋವರ್ಸ್ ಹೊಂದಿದ್ದ RCB, ಕೇವಲ 10 ದಿನಗಳಲ್ಲಿ 18 ಮಿಲಿಯನ್ ಹಂತ ತಲುಪಿದೆಯೆಂದು ತಿಳಿದುಬಂದಿದೆ.
ಈ ಸಾಧನೆಗೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 17 ವರ್ಷಗಳ ಬಳಿಕ ಚೆನ್ನೈನಲ್ಲಿ ಜಯ ಸಾಧಿಸಿರುವುದು ಪ್ರಮುಖ ಕಾರಣವೆಂದು RCB ಹೇಳಿದೆ. “ನಮ್ಮ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕ ಇಡಲು ಸಾಮಾಜಿಕ ಜಾಲತಾಣಗಳು ಸಹಾಯ ಮಾಡುತ್ತವೆ” ಎಂದು ಆರ್ಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್ ಹೇಳಿದ್ದಾರೆ.
ಈ ಋತುವಿನಲ್ಲಿ ಉತ್ತಮ ಪ್ರಾರಂಭ ಪಡೆದಿರುವ ಆರ್ಸಿಬಿ, ಟೇಬಲ್ ಟಾಪರ್ ಸ್ಥಾನದಲ್ಲಿದ್ದು, ಇಂದು (ಬುಧವಾರ) ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯಕ್ಕೆ ಸಜ್ಜಾಗಿದೆ.