back to top
26.3 C
Bengaluru
Friday, July 18, 2025
HomeNewsRCB 18 ವರ್ಷಗಳ ಕನಸು ನಿಜವಾಗಲಿದೆ  ಟ್ರೋಫಿ ಗೆಲ್ಲುವುದು ಖಚಿತ!

RCB 18 ವರ್ಷಗಳ ಕನಸು ನಿಜವಾಗಲಿದೆ  ಟ್ರೋಫಿ ಗೆಲ್ಲುವುದು ಖಚಿತ!

- Advertisement -
- Advertisement -

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು IPL 2025 ರ ಫೈನಲ್  ಗೆ ನಾಲ್ಕನೇ ಬಾರಿ ಸೇರುವ ಮೂಲಕ ಟ್ರೋಫಿ ಗೆಲ್ಲಲು ಬಹಳ ಸಮೀಪವಾಗಿದೆ. 2009, 2011, 2016ರಲ್ಲಿ ಫೈನಲ್ ಗೆ ಬಂದರೂ ಟ್ರೋಫಿ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಇತಿಹಾಸ ಹಿಂಬಾಲಿಸಿ, ಟ್ರೋಫಿ ಗೆಲ್ಲುವುದು ಖಚಿತವಾಗಿದೆ ಎಂದು ಅಭಿಮಾನಿಗಳು ಭರವಸೆ ಇಟ್ಟುಕೊಂಡಿದ್ದಾರೆ.

ಲೀಗ ಹಂತದ 14 ಪಂದ್ಯಗಳಲ್ಲಿ 9 ಬಾರಿ ಜಯ ಪಡೆದ RCB, ಪ್ಲೇಆಫ್ ಗೆ ಪ್ರವೇಶಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಫೈನಲಿಗೆ ಬಂದಿದೆ. ಜೂನ್ 3ರಂದು ಫೈನಲ್ ನಡೆಯಲಿದೆ ಮತ್ತು ಅಭಿಮಾನಿಗಳು ಈ ಬಾರಿ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದ್ದಾರೆ.

ಕಳೆದ IPL ಸೀಸನ್ ಗಳಲ್ಲಿ ಕ್ವಾಲಿಫೈಯರ್ 1 ಗೆದ್ದ ತಂಡಗಳು ಟ್ರೋಫಿ ಗೆದ್ದಿದ್ದು, 2018ರಿಂದ 2024ರವರೆಗೆ ಆ ಮಾದರಿ ಮುಂದುವರೆದಿದೆ. ಈಗ 2025ರಲ್ಲಿ ಆರ್ಸಿಬಿ ತಂಡ ಇದೇ ಹಾದಿಯಲ್ಲಿ ಸಾಗುತ್ತಿದೆ.

ನಿನ್ನೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 20 ರನ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಮುಂದಕ್ಕೆ ಬಂದಿದೆ.

18 ವರ್ಷಗಳ ಕಾಯುತ್ತಿದ್ದ RCB ಅಭಿಮಾನಿಗಳು ಈ ಬಾರಿ ತಮ್ಮ ತಂಡ ಟ್ರೋಫಿ ಗೆಲ್ಲಲೆಂದು ಕಾಳಜಿ ತೋರಿದ್ದಾರೆ. ಬೆಳಗಾವಿಯ ಅಭಿಮಾನಿ ಗೋಕಾಕ್ ನ ಶಿವಾನಂದ ಮಲ್ಲನ್ನವರ್, ಕಪ್ಪು ಗೆದ್ದ ದಿನವನ್ನು ಸರ್ಕಾರಿ ರಜೆ ಘೋಷಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page