back to top
26.5 C
Bengaluru
Thursday, February 5, 2026
HomeBusinessಕೇಂದ್ರಕ್ಕೆ RBI ಯಿಂದ ದಾಖಲೆ ಮಟ್ಟದ ಲಾಭಾಂಶ: 2.69 ಲಕ್ಷ ಕೋಟಿ ರೂಪಾಯಿ!

ಕೇಂದ್ರಕ್ಕೆ RBI ಯಿಂದ ದಾಖಲೆ ಮಟ್ಟದ ಲಾಭಾಂಶ: 2.69 ಲಕ್ಷ ಕೋಟಿ ರೂಪಾಯಿ!

- Advertisement -
- Advertisement -

Mumbai: 2024-25ನೇ ಸಾಲಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೇಂದ್ರ ಸರ್ಕಾರಕ್ಕೆ (Central Government) 2.69 ಲಕ್ಷ ಕೋಟಿ ರೂಪಾಯಿ ಲಾಭಾಂಶ (dividend) ನೀಡುವ ನಿರ್ಧಾರ ಮಾಡಿಕೊಂಡಿದೆ.

RBI ಗವರ್ನರ್ ಸಂಜಯ್ ಮಲ್ಲೋತ್ರಾ ನೇತೃತ್ವದಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ತಗೊಂಡಿದ್ದು, ದೇಶೀಯ ಹಾಗೂ ಜಾಗತಿಕ ಆರ್ಥಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಇದು ಕೈಗೊಳ್ಳಲಾಗಿದೆ.

ಹೀಗಾಗಿ, 2023-24ನೇ ಸಾಲಿನ 2.1 ಲಕ್ಷ ಕೋಟಿ ರೂಪಾಯಿ ಲಾಭಾಂಶಕ್ಕಿಂತ ಈ ಬಾರಿ ಶೇ. 27.4ರಷ್ಟು ಹೆಚ್ಚು ಡಿವಿಡೆಂಡ್ ನಿಕಾಸು ಮಾಡಲಾಗಿದೆ. 2022-23ನೇ ಸಾಲಿನಲ್ಲಿ 87,416 ಕೋಟಿ ರೂಪಾಯಿ ಲಾಭಾಂಶ ಸಿಕ್ಕಿತ್ತು.

RBI ಗೆ ಆದಾಯ ಆಗುವುದು ದೇಶೀಯ, ವಿದೇಶಿ ಬಡ್ಡಿ, ಸೇವಾ ಶುಲ್ಕ, ಕಮಿಷನ್ ಮತ್ತು ವಿದೇಶಿ ವಿನಿಮಯ ಲಾಭದಿಂದ. ಖರ್ಚುಗಳಲ್ಲಿ ಕರೆನ್ಸಿ ನೋಟು ಮುದ್ರಣ, ಬಡ್ಡಿ ಪಾವತಿಗಳು, ಸಿಬ್ಬಂದಿ ವೇತನ ಮತ್ತು ಕಚೇರಿ ವೆಚ್ಚಗಳು ಸೇರಿವೆ.

RBI ಈ ಆದಾಯ ಮತ್ತು ವೆಚ್ಚಗಳ ನಡುವಿನ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ಲಾಭಾಂಶವಾಗಿ ನೀಡುತ್ತದೆ.

ಕೇಂದ್ರ ಸರ್ಕಾರ ಬಜೆಟ್ ನಲ್ಲಿ 2.56 ಲಕ್ಷ ಕೋಟಿ ರೂಪಾಯಿ ಲಾಭಾಂಶ ಬರುವ ನಿರೀಕ್ಷೆಯಿತ್ತು, ಆದರೆ RBI ಇದಕ್ಕಿಂತ ಹೆಚ್ಚಾದ 2.69 ಲಕ್ಷ ಕೋಟಿ ರೂಪಾಯಿ ನೀಡುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page