ರೆಡ್ಮಿ ಟರ್ಬೋ 4 ಸ್ಮಾರ್ಟ್‌ಫೋನ್ (Redmi Turbo 4 Smartphone) ಜನವರಿ 2 ರಂದು ಬಿಡುಗಡೆಯಾಗಲಿದೆ. ಹೊಸ ಮೊಬೈಲ್ ಅನ್ನು ರೆಡ್ಮಿ ಅಧಿಕೃತವಾಗಿ ಘೋಷಿಸಿತು ಮತ್ತು ಅದರ ಪ್ರಮುಖ ವೈಶಿಷ್ಟ್ಯಗಳನ್ನು ಕೂಡಾ ಬಹಿರಂಗಪಡಿಸಿದೆ. ಈ ಫೋನಿನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 8400 ಪ್ರೊಸೆಸರ್ ಇದೆ. 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 20MP ಸೆಲ್ಫಿ ಕ್ಯಾಮೆರಾ ಹೊಂದಿದ ಈ ಫೋನ್, ಸ್ಮಾರ್ಟ್‌ಫೋನ್ ಪ್ರಿಯರಿಗೆ ನವೀಕರಣ ನೀಡಲಿದೆ.
- ಪವರ್ಫುಲ್ ಡಿಸ್ಪ್ಲೇ ಮತ್ತು ಪ್ರೊಸೆಸರ್: ರೆಡ್ಮಿ ಟರ್ಬೋ 4 ಫೋನಿನಲ್ಲಿ 6.67 ಇಂಚಿನ 1.5K ರೆಸೋಲ್ಯೂಶನ್ LTPS ಡಿಸ್ಪ್ಲೇ ಇದೆ, ಇದು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 8400 ಪ್ರೊಸೆಸರ್ ಇದರಲ್ಲಿದೆ, ಇದು 3.25GHz ಪ್ರೈಮ್ ಕೋರ್‌ನ್ನು ಒಳಗೊಂಡಿದೆ.
- ಕ್ಯಾಮೆರಾ ಸೆಟಪ್: ಈ ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 8MP ದ್ವಿತೀಯ ಕ್ಯಾಮೆರಾ ಇರಲಿದೆ. 20MP ಸೆಲ್ಫಿ ಕ್ಯಾಮೆರಾ ಚಿತ್ತಗಳನ್ನು ಸೆರೆಹಿಡಿಯಲು ಅತ್ಯುತ್ತಮವಾಗಿದೆ.
- ಬ್ಯಾಟರಿ ಮತ್ತು ಚಾರ್ಜಿಂಗ್: 6500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ, 90W ಚಾರ್ಜಿಂಗ್ ಸೌಲಭ್ಯವನ್ನು ಬಳಕೆದಾರರಿಗೆ ಪೂರೈಸಲಿದೆ.
- ಕನೆಕ್ಟಿವಿಟಿ ಮತ್ತು ಇತರ ವೈಶಿಷ್ಟ್ಯಗಳು: ರೆಡ್ಮಿ ಟರ್ಬೋ 4 ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, USB ಟೈಪ್ C ಸೇರಿದಂತೆ ಹಲವು ಸಂಪರ್ಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.