Bengaluru: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation) ನಡೆದಂತಹ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ನಾಗೇಂದ್ರ (B Nagendra) ಅವರಿಗೆ ಬೆಂಗಳೂರಿನ 82ನೇ ಸಿಟಿ ಸಿವಿಲ್ ಕೋರ್ಟ್ (City Civil Court) ಜಾಮೀನು ಮಂಜೂರು ಮಾಡಿದ್ದು, ಇಂದು ಪರಪ್ಪನ ಅಗ್ರಹಾರ (Parappana Agrahara) ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವರು, ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರ ಏನೂ ಇರಲಿಲ್ಲ.
ಕೇಂದ್ರ ನಾಯಕರ ಒತ್ತಡದಿಂದ ನನ್ನನ್ನು ಏಕಾಏಕಿ ಬಂಧನಕ್ಕೆ ಒಳಪಡಿಸಿಲಾಯಿತು. ವಿಚಾರಣೆ ವೇಳೆ CM ಮತ್ತು DCM ಹೆಸರು ಹೇಳುವಂತೆ ಇಡಿ ಅಧಿಕಾರಿಗಳಿಂದ ಒತ್ತಡ ಹೇರಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಆದರೆ ಪ್ರಕರಣದಲ್ಲಿ ನನ್ನ ಪಾತ್ರ ಏನೂ ಇಲ್ಲ. ಹಾಗಾಗಿ ನಾನು ಅವರುಗಳ ಹೆಸರು ಹೇಳಲು ನಿರಾಕರಿಸಿದೆ. ಬ್ಯಾಂಕಿನಲ್ಲಿ ನಡೆದಿರುವ ಹಗರಣಕ್ಕೆ ಬಿಜೆಪಿಯವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ.
ಬ್ಯಾಂಕ್ ಅಧಿಕಾರಿಗಳು ಸರ್ಕಾರದ ಯಾವುದೇ ಆದೇಶ ಇಲ್ಲದೆ ಹಣ ವರ್ಗಾವಣೆ ಮಾಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದ್ದರು KYC ಕೂಡ ನೋಡದೆ ಹಣ ವರ್ಗಾವಣೆ ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ಹಗರಣ ಅಲ್ಲ, ಇದು ಬ್ಯಾಂಕಿನ ಹಗರಣ. ಈ ವಿಚಾರ ಸಿಎಂ ಮತ್ತು ಸಚಿವನಾದ ನನಗೆ ಕೂಡ ಗೊತ್ತಿಲ್ಲ. ಆದರೆ ವಿನಾಕಾರಣ ಇಡಿಯವರು CM ಹೆಸರು ತಳಕು ಹಾಕಿಸಲು ಯತ್ನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.