ಏಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರಿಲಾಯನ್ಸ್ ಇಂಡಸ್ಟ್ರೀಸ್‌ನ ಮಾಲಕ ಮುಖೇಶ್ ಅಂಬಾನಿಯವರ (Reliance Industries Mukesh Ambani) ಪತ್ನಿ ನೀತಾ ಅಂಬಾನಿ (Nita Ambani) ಈಗಾಗಲೇ ತನ್ನ ಸಮಾಜಮುಖಿ, ಮಕ್ಕಳ ಏಳಿಗೆ ಕಾರ್ಯ ಸೇರಿದಂತೆ ಹಲವಾರು ಜನಪರ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಹೊಸ ಸೇವಾ ಯೋಜನೆಯನ್ನು (service plan) ಘೋಷಿಸಿದ್ದಾರೆ.
ಮಹಿಳೆಯರು ಹಾಗೂ ಮಕ್ಕಳಿಗಾಗಿ ಹೊಸ ಸೇವಾ ಯೋಜನೆಯನ್ನು (healthcare plan) ರಿಲಾಯನ್ಸ್ ಫೌಂಡೇಶನ್‌ನ (Reliance Foundation) ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅವರು ಪ್ರಕಟಿಸಿದ್ದು ಈ ಮೂಲಕ 100,000ಕ್ಕೂ ಅಧಿಕ ಸಂಖ್ಯೆಯ ಮಹಿಳೆಯರು ಹಾಗೂ ಮಕ್ಕಳ ಆರೋಗ್ಯ ಕಲ್ಯಾಣಕ್ಕೆ ಮುಂದಾಗಿದ್ದಾರೆ.
ನೀತಾ ಅಂಬಾನಿ ಅವರು ಘೋಷಿಸಿದ ಹೊಸ ಆರೋಗ್ಯ ಸೇವಾ ಯೋಜನೆ (Health Seva Plan), ಇದು ಮಕ್ಕಳು, ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರಿಗೆ ಪ್ರಮುಖ ತಪಾಸಣೆ ಮತ್ತು ಚಿಕಿತ್ಸೆಗಳಿಗೆ ಆದ್ಯತೆ ನೀಡುವುದರ ಮೇಲೆ ಕೇಂದ್ರೀಕರಿಸಿದ ಸಮಗ್ರ ಯೋಜನೆಯಾಗಿದೆ.
ಈ ಯೋಜನೆಯು ಸರ್ HN ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ 10 ನೇ ವಾರ್ಷಿಕೋತ್ಸವದ ನೆನಪಿಗಾಗಿ ಹೊಸ ಯೋಜನೆಯನ್ನು ಘೋಷಿಸಲಾಗಿದೆ. ಈ ಮೂಲಕ ಗಣನೀಯ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಆರೋಗ್ಯ ಸೇವಾ ಯೋಜನೆಯ ಭಾಗವಾಗಿ ಸುಮಾರು 50,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆಯ ತಪಾಸಣೆ ಹಾಗೂ ಉಚಿತ ಚಿಕಿತ್ಸೆ, 50,000 ಮಹಿಳೆಯರ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್‌ನ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಈ ಉಪಕ್ರಮವು 10,000 ಹದಿಹರೆಯದ ಹುಡುಗಿಯರಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆಗಳನ್ನು ಒಳಗೊಂಡಿದೆ.
ಯೋಜನೆಯ ಬಗ್ಗೆ ಮಾಹಿತಿ ನೀಡಿದ ನೀತಾ ಅವರು ಎಚ್‌ಎನ್ ಆಸ್ಪತ್ರೆಯ ಬಗ್ಗೆ ಕೂಡ ತಿಳಿಸಿದ್ದಾರೆ. 10 ವರ್ಷಗಳಿಂದ, ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯು ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ಪ್ರತಿಯೊಬ್ಬ ಭಾರತೀಯರಿಗೂ ಪ್ರವೇಶಿಸಲು ಮತ್ತು ಕೈಗೆಟುಕುವಂತೆ ಮಾಡುವ ನಮ್ಮ ದೃಷ್ಟಿಯಿಂದ ನಡೆಸಲ್ಪಟ್ಟಿದೆ.
ನಾವು ಹೊಸ ಆರೋಗ್ಯ ಸೇವಾ ಯೋಜನೆಯನ್ನು ಉಚಿತವಾಗಿ ಪ್ರಾರಂಭಿಸಿದ್ದೇವೆ. ಉತ್ತಮ ಆರೋಗ್ಯವು ಸಮೃದ್ಧ ರಾಷ್ಟ್ರದ ಅಡಿಪಾಯ ಎಂದು ನಾವು ನಂಬುತ್ತೇವೆ ಮತ್ತು ಆರೋಗ್ಯವಂತ ಮಹಿಳೆಯರು ಮತ್ತು ಮಕ್ಕಳು ಅಭಿವೃದ್ಧಿ ಹೊಂದುತ್ತಿರುವ ಸಮಾಜದ ಮೂಲಾಧಾರವಾಗಿದೆ ಎಂದು ತಿಳಿಸಿದ್ದಾರೆ.